ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗವಾಹಿನಿ(ರಿ)ಸಹಯೋಗದಲ್ಲಿ ಜೂ.23 ರ ಮಂಗಳವಾರ ಸಂಜೆ 6 ಗಂಟೆಗೆ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬೋಳುವಾರು ಮಹಮ್ಮದ್ ಕುಂಞ ಕಾದಂಬರಿ ಆಧಾರಿತ ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸುವ ನಾಟಕ ‘ಸ್ವಾತಂತ್ರ್ಯ ದ ಓಟ’ ಪ್ರದರ್ಶನಗೊಳ್ಳುತ್ತಿದೆ.
ರಂಗ ಪಠ್ಯ ವಿನ್ಯಾಸ ಮತ್ತು ನಿರ್ದೇಶನ ನಟರಾಜ್ ಹೊನ್ನವಳ್ಳಿ. ರಂಗ ರೂಪಾಂತರ ಮಂಜುನಾಥ್ ಗೋಮಾರದಹಳ್ಳಿ.ಸಹ ನಿರ್ದೇಶನ ಸಲ್ಮಾ ದಂಡಿನ್. ಸಂಗೀತ ರಾಘವ ಕಮ್ಮಾರ ರಂಗಸಜ್ಜಿಕೆ ನಿರ್ಮಾಣ ಮಧುಸೂದನ್,ರಮೇಶ್ ಎಸ್. ಮೈಸೂರು,ಶಂಕರ್ ಕೆ. ಬೆಳಲಕಟ್ಟೆ. ಬೆಳಕು ಮಂಜು ನಾರಾಯಣ್. ವಸ್ತ್ರ ವಿನ್ಯಾಸ ಸಹನಾ ಪಿಂಜರ್ಸ್ ಅವರು ನಿರ್ವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಚೇತನ ಕಲಾ ವಾಹಿನಿ(ರಿ), ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಇನ್ನಿತರೆ ಸಂಘ-ಸಂಸ್ಥೆಗಳು ಸ್ಥಳೀಯ ಸಹಕಾರ ನೀಡಿದ್ದಾರೆ.
‘ಸ್ವಾತಂತ್ರ್ಯದ ಓಟ’ ನಾಟಕ ಕೇವಲ ಒಂದು ನಾಟಕವಲ್ಲ; ಅದು ಇತಿಹಾಸದ ನೆನಪುಗಳನ್ನು ಮರುಕಳಿಸುವ, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಚಿಂತಿಸುವಂತೆ ಮಾಡುವ ಹಾಗೂ ಮಾನವೀಯ ಮೌಲ್ಯಗಳನ್ನು ಪುನರ್ಪರಿಶೀಲಿಸಲು ಪ್ರೇರೇಪಿಸುವ ಅಪೂರ್ವ ರಂಗಾನುಭವವಾಗಿದೆ. ಮಳವಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಈ ನಾಟಕಕ್ಕೆ ದೊರೆತಿರುವ ಪ್ರೇಕ್ಷಕರ ಅಪಾರ ಸ್ಪಂದನೆ ಅದರ ಕಲಾತ್ಮಕ ಯಶಸ್ಸಿಗೆ ಸಾಕ್ಷಿಯಾಗಿದೆ.