ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ನಾಗಮಲೆ ಹಾಗೂ ಇಂಡಿಗನತ್ತ ಗ್ರಾಮದ ಸುತ್ತಮುತ್ತ ಕಾಟ ಕೊಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ಗೋಪಿನಾಥಂ ವನ್ಯಜೀವಿ ವಲಯದ ಇಂಡಿಗನತ್ತ ಸುತ್ತಮುತ್ತ ಓಡಾಡುತ್ತಿದ್ದ ಚಿರತೆಯನ್ನು ಇಂದು ( ಗುರುವಾರ) ಸೆರೆ ಹಿಡಿಯಲಾಗಿದೆ. ಈ ಚಿರತೆಯ ಹೆಣ್ಣು ಚಿರತೆ ಯಾಗಿದ್ದು, ಅಂದಾಜು 2-3 ವರ್ಷ ವಯಸ್ಸಿನದ್ದಾಗಿದೆ.
ಬೋನಿನಲ್ಲಿ ಸೆರೆಸಿಕ್ಕ ಚಿರತೆಯನ್ನು ಮೈಸೂರಿನ ಇಲಾಖಾ ಪಶು ವೈದ್ಯಾಧಿಕಾರಿ ಆದರ್ಶ್ ಆರೋಗ್ಯ ತಪಾಸಣೆ ನಡೆಸಿದ್ದು, ಚಿರತೆಯು ಆರೋಗ್ಯವಾಗಿದೆ. ಈ ಚಿರತೆಯನ್ನು ಸ್ಥಳಾಂತರಿಸುವ ಸಂಬಂಧ ಅರಣ್ಯ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.