ಮೈಸೂರು: ಲಯನ್ಸ್ ಕ್ಲಬ್ ಆಫ್ ಪರಿವರ್ತನ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಎಸ್.ಪಿ.ಬಾಲಸುಬ್ರಹ್ಮಣ್ಯರವರ ಹುಟ್ಟುಹಬ್ಬ -ಹಾಡು ಹಬ್ಬ ಕಾರ್ಯಕ್ರಮವನ್ನು ಜೂ.4 ರಂದು ಸಂಜೆ 5 ಗಂಟೆಗೆ ಗೋಕುಲಂ 3ನೇ ಹಂತದ ಡಾಕ್ರ‍್ಸ್ ಕಾರ್ನರ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಕೆ.ಹರೀಶ್‌ಗೌಡ, ಮಾಜಿ ಶಾಸಕ ಎಲ್.ನಾಗೇಂದ್ರ, ಜೆಡಿಎಸ್ ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು, ಮಾಜಿ ಜಿಲ್ಲಾ ರಾಜ್ಯಪಾಲ ಕೆ.ದೇವೇಗೌಡ, ಲಯನ್ಸ್ ಕ್ಲಬ್ ಆಫ್ ಪರಿವರ್ತನ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಚಮರಂ, ಗೈಡಿಂಗ್ ಲಯನ್ ಉಮಾಶಂಕರ್ ಪಿ, ಕವಿ ಮಹೇಶ್ ಇರಸವಾಡಿ, ಸತೀಶ್ ಹೆಗ್ಗೂರು, ಸವಿತ ಎಸ್.ಗೌಡ ಭಾಗವಹಿಸಲಿದ್ದಾರೆ.
ಕರೋಕೆ ಗಾಯನದಲ್ಲಿ ಗಾಯಕರಾದ ಆರ್.ಮಹೇಂದ್ರ, ಆರ್. ರವಿಕುಮಾರ್, ಕೃಷ್ಣಮೂರ್ತಿ ಚಮರಂ, ಗಾನಾಸುಮಾ ಪಟ್ಟಸೋಮಹಳ್ಳಿ, ಸರ್ವಮಂಗಳ, ಜಾಯ್ಸ್ ವಿಶಾಖ್, ಕಾತ್ಯಾಯಿನಿ ಎಚ್.ಎಸ್. ಶ್ರೀಕಂಠ ಭಾಗವಹಿಸಲಿದ್ದಾರೆ.