ಪದವಿ ಇರಲಿ, ಉದ್ಯಮಶೀಲತೆ ಮಂಚೂಣಿಗೆ ಬರಲಿ

ಮಣಿಕಂಠ ಜನತಾ ರಾಯಭಾರಿ
1 Min Read

ಕಿರಿಯ ಗೆಳೆಯರೊಬ್ಬರು ಇಂದು ಕರೆ ಮಾಡಿ ಸರ್ ನಾನೊಂದು ಜೆರಾಕ್ಸ್ ಶಾಪ್ ತೆಗೆಯುತ್ತಿದ್ದೇನೆ ಸರ್ ಎಂದರು. ಅವರು ಪಿಹೆಚ್‌ಡಿ ಪದವೀಧರರು ಮತ್ತು ಅವರ ಸಮಸ್ಯೆ ಅದೇ ಆಗಿದೆ! ತಾನು ಪಿಹೆಚ್‌ಡಿ ಓದಿ ಜೆರಾಕ್ಸ್ ಶಾಪ್ ಕೆಲಸ ಮಾಡಬೇಕ ಎಂಬುದು. ನಾನು ಏನು ಆಗಲ್ಲ ಮಾಡಿ ಎಂದೇ. ಯಾಕೆಂದರೆ ಇಂದು ಉದ್ಯೋಗ ಸಮಸ್ಯೆ. ಪಿಹೆಚ್‌ಡಿ ಪದವೀದರ ಆದರೂ ಒಂದು ಗೆಸ್ಟ್ ಉಪನ್ಯಾಸಕನಾಗಿ ಕೆಲಸ ಮಾಡಬಹುದು. ಆದರೆ ಆದಾಯ?

ಅಂದಹಾಗೆ ಒಂದು ಸಣ್ಣ ಅಂಗಡಿ ಕೇವಲ ಅಂಗಡಿ ಆಗಿರೊಲ್ಲ. ಅದು ಸರ್ವಿಸ್ ಸೆಂಟರ್ ಆಗಿರುತ್ತದೆ. ಪ್ರಯತ್ನ ಪಟ್ಟರೆ ಹತ್ತಾರು ಸೇವೆಗಳನ್ನು ಅಲ್ಲಿ ಕೊಡಬಹುದು. ಆ ಕಿರಿಯ ಸ್ನೇಹಿತರು ಒಬ್ಬ ಪುಸ್ತಕ ಪ್ರಕಾಶಕರು. ಅಲ್ಲಿಂದಲೇ ಅವರು ಪುಸ್ತಕ ಪಬ್ಲಿಷ್ ಮಾಡಬಹುದು. ನಾಲ್ಕಾರು ಜನಕ್ಕೆ ಉದ್ಯೋಗ ನೀಡಬಹುದು. ತಾನು ಸ್ವಾವಲಂಬಿ ಆಗಬಹುದು. ಇದು ಒಂದೇ ದಿನಕ್ಕೆ ಆಗುವ ಕೆಲಸ ಅಲ್ಲ. ಹತ್ತಾರು ವರ್ಷ ತೊಡಗಿಸಿಕೊಳ್ಳಬೇಕಾಗುತ್ತದೆ. ತೊಡಗಿಸಿಕೊಳ್ಳುವುದೇ ಜೀವನ!

Contents
ಕಿರಿಯ ಗೆಳೆಯರೊಬ್ಬರು ಇಂದು ಕರೆ ಮಾಡಿ ಸರ್ ನಾನೊಂದು ಜೆರಾಕ್ಸ್ ಶಾಪ್ ತೆಗೆಯುತ್ತಿದ್ದೇನೆ ಸರ್ ಎಂದರು. ಅವರು ಪಿಹೆಚ್‌ಡಿ ಪದವೀಧರರು ಮತ್ತು ಅವರ ಸಮಸ್ಯೆ ಅದೇ ಆಗಿದೆ! ತಾನು ಪಿಹೆಚ್‌ಡಿ ಓದಿ ಜೆರಾಕ್ಸ್ ಶಾಪ್ ಕೆಲಸ ಮಾಡಬೇಕ ಎಂಬುದು. ನಾನು ಏನು ಆಗಲ್ಲ ಮಾಡಿ ಎಂದೇ. ಯಾಕೆಂದರೆ ಇಂದು ಉದ್ಯೋಗ ಸಮಸ್ಯೆ. ಪಿಹೆಚ್‌ಡಿ ಪದವೀದರ ಆದರೂ ಒಂದು ಗೆಸ್ಟ್ ಉಪನ್ಯಾಸಕನಾಗಿ ಕೆಲಸ ಮಾಡಬಹುದು. ಆದರೆ ಆದಾಯ?ಅಂದಹಾಗೆ ಒಂದು ಸಣ್ಣ ಅಂಗಡಿ ಕೇವಲ ಅಂಗಡಿ ಆಗಿರೊಲ್ಲ. ಅದು ಸರ್ವಿಸ್ ಸೆಂಟರ್ ಆಗಿರುತ್ತದೆ. ಪ್ರಯತ್ನ ಪಟ್ಟರೆ ಹತ್ತಾರು ಸೇವೆಗಳನ್ನು ಅಲ್ಲಿ ಕೊಡಬಹುದು. ಆ ಕಿರಿಯ ಸ್ನೇಹಿತರು ಒಬ್ಬ ಪುಸ್ತಕ ಪ್ರಕಾಶಕರು. ಅಲ್ಲಿಂದಲೇ ಅವರು ಪುಸ್ತಕ ಪಬ್ಲಿಷ್ ಮಾಡಬಹುದು. ನಾಲ್ಕಾರು ಜನಕ್ಕೆ ಉದ್ಯೋಗ ನೀಡಬಹುದು. ತಾನು ಸ್ವಾವಲಂಬಿ ಆಗಬಹುದು. ಇದು ಒಂದೇ ದಿನಕ್ಕೆ ಆಗುವ ಕೆಲಸ ಅಲ್ಲ. ಹತ್ತಾರು ವರ್ಷ ತೊಡಗಿಸಿಕೊಳ್ಳಬೇಕಾಗುತ್ತದೆ. ತೊಡಗಿಸಿಕೊಳ್ಳುವುದೇ ಜೀವನ!ನೆನಪಿರಲಿ, ಪದವಿ ಯಾವುದೇ ಇರಲಿ ಕೆಲಸ ಯಾವುದಾದರೂ ಮಾಡುವೆ ಎಂದವ ಮಾತ್ರ ಇಂದು ಬದುಕಬಲ್ಲ. ಪದವಿ ಎಂಬ ಅಹಂ ಅನ್ನು ಕೇವಲ ಸ್ವಲ್ಪವೇ ಸ್ವಲ್ಪ ದೂರ ಇಟ್ಟು, ನಾಲ್ಕಾರು ಜನರ ಜೊತೆ ಕಮ್ಯೂನಿಕೇಷನ್ ಕಲಿತು ಹೊಸ ಹೊಸ ಪ್ರಯತ್ನ ತೊಡಗಿದರೆ ಪದವಿ ಗಳಿಸುವ ಆದಾಯಕ್ಕಿಂತ ಹೆಚ್ಚು ಸಂಪಾದಿಸಬಹುದು. ಅಂದಹಾಗೆ ಉದ್ಯೋಗದಲ್ಲಿ ಇಂದು ಇನ್ನೊಬ್ಬರ ಅಡಿಯಾಳಾಗಿ ಬದುಕಬೇಕು. ಅಂತಹ ಬದುಕಿನಲ್ಲಿ ಸ್ವತಂತ್ರ ಇರುವುದಿಲ್ಲ. ಒತ್ತಡದ ಮತ್ತು ಮಾನಸಿಕ ತೊಳಲಾಟದ ಬದುಕು ಅದಾಗಿರುತ್ತದೆ‌. ಆದರೆ ಉದ್ಯಮದಲ್ಲಿ ನಾವೇ ರಾಜ. ನಷ್ಟ ಆದರೆ ಮುಂದೆ ನಡೆಯುವುದು. ಲಾಭ ಆದರೆ ಗುಟ್ಟಾಗಿ ಎಂಜಾಯ್ ಮಾಡುವುದು. ಈ ನಿಟ್ಟಿನಲ್ಲಿ ಜೆರಾಕ್ಸ್ ಅಂಗಡಿ ತೆಗೆಯಲು ಹೊರಟ ಕಿರಿಯ ಗೆಳೆಯನಿಗೆ ಇಷ್ಟು ಹೇಳಿ ಶುಭ ಹಾರೈಸಿದೆ.-ರಘೋತ್ತಮ ಹೊ.ಬ

ನೆನಪಿರಲಿ, ಪದವಿ ಯಾವುದೇ ಇರಲಿ ಕೆಲಸ ಯಾವುದಾದರೂ ಮಾಡುವೆ ಎಂದವ ಮಾತ್ರ ಇಂದು ಬದುಕಬಲ್ಲ. ಪದವಿ ಎಂಬ ಅಹಂ ಅನ್ನು ಕೇವಲ ಸ್ವಲ್ಪವೇ ಸ್ವಲ್ಪ ದೂರ ಇಟ್ಟು, ನಾಲ್ಕಾರು ಜನರ ಜೊತೆ ಕಮ್ಯೂನಿಕೇಷನ್ ಕಲಿತು ಹೊಸ ಹೊಸ ಪ್ರಯತ್ನ ತೊಡಗಿದರೆ ಪದವಿ ಗಳಿಸುವ ಆದಾಯಕ್ಕಿಂತ ಹೆಚ್ಚು ಸಂಪಾದಿಸಬಹುದು. ಅಂದಹಾಗೆ ಉದ್ಯೋಗದಲ್ಲಿ ಇಂದು ಇನ್ನೊಬ್ಬರ ಅಡಿಯಾಳಾಗಿ ಬದುಕಬೇಕು. ಅಂತಹ ಬದುಕಿನಲ್ಲಿ ಸ್ವತಂತ್ರ ಇರುವುದಿಲ್ಲ. ಒತ್ತಡದ ಮತ್ತು ಮಾನಸಿಕ ತೊಳಲಾಟದ ಬದುಕು ಅದಾಗಿರುತ್ತದೆ‌. ಆದರೆ ಉದ್ಯಮದಲ್ಲಿ ನಾವೇ ರಾಜ. ನಷ್ಟ ಆದರೆ ಮುಂದೆ ನಡೆಯುವುದು. ಲಾಭ ಆದರೆ ಗುಟ್ಟಾಗಿ ಎಂಜಾಯ್ ಮಾಡುವುದು. ಈ ನಿಟ್ಟಿನಲ್ಲಿ ಜೆರಾಕ್ಸ್ ಅಂಗಡಿ ತೆಗೆಯಲು ಹೊರಟ ಕಿರಿಯ ಗೆಳೆಯನಿಗೆ ಇಷ್ಟು ಹೇಳಿ ಶುಭ ಹಾರೈಸಿದೆ.

-ರಘೋತ್ತಮ ಹೊ.ಬ

Share this Article
Leave a comment