ಚಾಮರಾಜನಗರ: ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ತಿಳಿದರು.
ತಾಲ್ಲೂಕಿನ ಹರವೆ ಗ್ರಾಮದ ಶ್ರೀ ಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕೈಗಾರಿಕೆ ಮತ್ತು ನಗರೀಕರಣದಿಂದ ಪ್ರಕೃತಿಯ ನಾಶ ಆರಂಭವಾಗುತ್ತಿದೆ. ಆಧುನಿಕ ಜಗತ್ತಿನ ಜೀವನಶೈಲಿ, ನೂತನ ಆವಿಷ್ಕಾರದಿಂದ ಜೀವನ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರಕೃತಿ ಮತ್ತು ಪರಿಸರದ ಅವನತಿಯು ನಡೆಯುತ್ತಿದೆ. ಯುವಕರು, ನಾಗರಿಕರು ಪ್ರತಿಯೊಬ್ಬ ಮನುಷ್ಯನ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಗೆ ಎಷ್ಟು ಹೋರಾಟ ನಡೆಯುತ್ತಿದೆಯೋ ಅಷ್ಟೇ ಮಟ್ಟದ ಹೋರಾಟವನ್ನು ಪ್ರಕೃತಿಯ ರಕ್ಷಣೆಗೆ ಮಾಡಬೇಕಿದೆ ಎಂದರು.
ಜಿಲ್ಲಾಧಿಕಾರಿ ಶ್ರೀ ರೂಪಾ ಮಾತನಾಡಿ, ರೈತ ಸಂಘಟನೆಗಳು ಕೇವಲ ಹೋರಾಟಕ್ಕೆ ಸೀಮಿತವಾಗದೆ. ಪ್ರಕೃತಿಯ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಣೆಯಲ್ಲಿ ಮುಂದಾಗಿರುವುದು ಜಾಗೃತಿಗೆ ಚಾಲನೆ ನೀಡುತ್ತಿರುವುದು ಭವಿಷ್ಯದಲ್ಲಿ ಪರಿಸರ ರಕ್ಷಣೆಗೆ ಬುನಾದಿ ಆಗಬಹುದು. ಸಾವಯವ ಕೃಷಿ ಮತ್ತು ರೈತರ ರಕ್ಷಣೆಗೆ ಮೂಲ ಅವಕಾಶವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಹಂಡುವಿನಹಳ್ಳಿ ರಾಜಣ್ಣ ಹಾಲಿನ ನಾಗರಾಜ್, ಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿಗಳಾದ ಗಿರೀಶ್, ಎಸಿಎಫ್ ಮಂಜುನಾಥ್, ಮಲಿಯುರ್ ಮಹೇಂದ್ರ, ಸತೀಶ್, ಮಹೇಶ್, ಶ್ರೀಕಂಠ, ರಾಮಣ್ಣ, ಬಸವರಾಜು, ನಾಗರಾಜು, ಪಟ್ಟಮಲ್ಲೇಗೌಡ, ರಾಜುಗೌಡ ಮುಂತಾದವರು ಉಪಸ್ಥಿತರಿದ್ದರು.