ಪ್ರತಿಭಟನೆಗೆ ತೆರಳಿದ ಯುವ ಕಾಂಗ್ರೆಸ್ಸಿಗರು 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆಯ ಅಕ್ರಮವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕೈಗೊಂಡಿರುವ ಪ್ರತಿಭಟನೆಗೆ ಚಾಮರಾಜನಗರ ಯುವ ಕಾಂಗ್ರೆಸ್ಸಿಗರು ಗುರುವಾರ ತೆರಳಿದರು.

ನಗರದಿಂದ ಖಾಸಗಿ ಬಸ್ ಮೂಲಕ ತೆರಳಿದ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು, ಪ್ರತಿಭಟನೆಯ ಪೋಸ್ಟರ್ ಗಳನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿ.ಯೋಗೇಂದ್ರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೋರಿಕೆ ಮೂಲಕ ಪರೀಕ್ಷೆಯ ಅಕ್ರಮಗಳಿಗೆ ರಹದಾರಿ ಮಾಡಿಕೊಟ್ಟಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಪದಾಧಿಕಾರಿಯಾದ ಅನಂತ್ ಕುಮಾರ್, ಅಕ್ಷಯ್, ಪ್ರದೀಪ್, ಮನು, ಶಶಾಂಕ್, ಮುತ್ತುರಾಜ್, ಸುನೀಲ್, ವಿಕಾಸ್, ಗುರು ಮಲ್ಲು, ಅಪ್ಪು, ನಿರಂಜನ್ ಹಾಗೂ ಇತರರು ಹಾಜರಿದ್ದರು.

 

 

 

Share this Article
Leave a comment