ಬೇಗೂರು ಐಟಿಐ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಣಿಕಂಠ ಜನತಾ ರಾಯಭಾರಿ
0 Min Read

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಚಾಮರಾಜನಗರ ಸಹಯೋಗದಲ್ಲಿ ರಕ್ತದಾನದ ಬಗ್ಗೆ ಅರಿವು, ರಕ್ತದ ಗುಂಪಿನ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಬಸವರಾಜೇಂದ್ರ ಆಸ್ಪತ್ರೆ ಚಾಮರಾಜನಗರದ ಆಡಳಿತ ಅಧಿಕಾರಿ & ಸಿಬ್ಬಂದಿಗಳು ಮತ್ತು ಸಂಸ್ಥೆಯ ಪ್ರಾಚಾರ್ಯರು, &‌ಸಿಬ್ಬಂದಿಗಳು ಹಾಜರಿದ್ದು ಒಟ್ಟು 35 ಯೂನಿಟ್ 35 ತರಬೇತಿದಾರರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಸುಚಿತ್ರ ಸಿ.ಆರ್ ಪ್ರಾಚಾರ್ಯರು, ರಜನಿ ಆಡಳಿತ ಅಧಿಕಾರಿ, ಹೆಚ್ ಎಸ್ ಪ್ರಸಾದ್ ತರಬೇತಿ ಅಧಿಕಾರಿ ಮತ್ತು ಡಾ. ಮಂಜು ನಾಯಕ್ ಹಾಗೂ ಸಿಬ್ಬಂದಿಗಳು ಮತ್ತಿತರರಿದ್ದರು.

Share this Article
Leave a comment