ಮನೆ ಕೆಲಸಕ್ಕೆ ಸೇರಿದ್ದವರೇ 25 ಲಕ್ಷ ರೂ, ದೋಚಿದ್ರು..!

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ಗುತ್ತಿಗೆದಾರನ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ನೇಪಾಳಿ ಮೂಲದ ದಂಪತಿ 25 ಲಕ್ಷ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ.

ಅರ್ಕಾವತಿ ಲೇಔಟ್‌ನ ಗುತ್ತಿಗೆದಾರನ ಮನೆಯಲ್ಲಿ ಕಳೆದ ಒಂದು ತಿಂಗಳಿಂದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ದಂಪತಿ ಕೆಲಸ ಮಾಡುತ್ತಿದ್ದರು. ಪತ್ನಿ ಮನೆ ಕೆಲಸ ಹಾಗೂ ಪತಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕೆಲಸಗಾರರಿಗೆ ವೇತನ ನೀಡಲು ಮನೆಯ ಕಬೋರ್ಡ್‌ನಲ್ಲಿ 25 ಲಕ್ಷ ರೂ. ನಗದು ಇಡಲಾಗಿತ್ತು. ಒಂದು ವಾರದ ಹಿಂದೆ ಮನೆಯವರು ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ವೇಳೆ ದಂಪತಿ ಹಣ ಕಳವು ಮಾಡಿ ಪರಾರಿಯಾಗಿದ್ದರು.

ಮನೆಗೆ ವಾಪಸ್ ಬಂದಾಗ ದಂಪತಿ ಕಾಣೆಯಾಗಿದ್ದರಿಂದ ಅನುಮಾನಗೊಂಡ ಮನೆಯವರು ಪರಿಶೀಲನೆ ನಡೆಸಿದಾಗ ಕಬೋರ್ಡ್‌ನಲ್ಲಿದ್ದ 25 ಲಕ್ಷ ರೂ. ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕೆಂಗೇರಿ ಸಮೀಪ ವಾಸವಿದ್ದ ಪವನ್ ಬಿಸ್ತಾ ಹಾಗೂ ಸೀತಾ ಬಿಸ್ತಾ ದಂಪತಿಯನ್ನು ನಗದು ಸಮೇತ ಬಂಧಿಸಿದ್ದಾರೆ. ಕಳ್ಳತನವಾಗಿದ್ದ ಹಣವನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Share this Article
1 Comment