ಚಾಮರಾಜನಗರ: ಮಸಣಾಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಗಳ ಮೇಲೆ ದೂರು ದಾಖಲಾಗಿದೆ.
ತಾಲೂಕಿನ ಮಸಣಾಪುರ ಗ್ರಾಮದ ನಿವಾಸಿ ಶಿವಣ್ಣ ಎಂಬುವವರ ಮಗ ಚಂದ್ರು ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾನೆ ಎಂದು ಗ್ರಾಮಸ್ಥರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈಗ ಶಿವಣ್ಣ ಅವರು ನನ್ನ ಮಗ ಚಂದ್ರುವಿಗೆ ಗುಂಪುಕಟ್ಟಿಕೊಂಡು ಬಂದು ಕೈಗಳಿಂದ, ದೊಡ್ಡ ಮತ್ತು ಕಲ್ಲುಗಳಿಂದ ಮುಖ, ಮೈಕೈ ಕಾಲುಗಳಿಗೆ ಹೊಡೆದು ಹಲೆ ಮಾಡಿ ಕಂಬಕ್ಕೆ ಕಟ್ಟಿ ಚಪ್ಪಲಿ ಹಾರ ಹಾಕಿರುವವರ ಮೇಲೆ ಕಾನೂನುರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?: ನನ್ನ ಮಗ ಚಂದ್ರು ನನ್ನ ಹೆಂಡತಿಯ ಊರಾದ ಉಪ್ಪಿನಮೋಳಿ ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ: 13-06-2026 ರಂದು ರಾತ್ರಿ ನನ್ನ ಮಗ ಚಂದ್ರುವಿಗೆ ಊಟ ಮಾಡಿಸಿ ನಮ್ಮ ಮನೆಯ ಮೇಲ್ಬಾಗದಲಿ ಮಲಗಿಸಿದ್ದೆ. ದಿನಾಂಕ: 14-06-2026 ರಂದು ನಾನು ಮನೆಯಲ್ಲಿದ್ದಾಗ ಬೆಳಗ್ಗೆ ಸುಮಾರು 6-00 ಗಂಟೆಯ ಸಮಯದಲ್ಲಿ, ಅಕ್ಕಪಕ್ಕದವರು ನಿಮ್ಮ ಮಗ ಚಂದ್ರುವನ್ನು ಮಸಣಾಪುರದ ಜನರು ಹೊಡೆದು ಲೈಟ್ ಕಂಬಕ್ಕೆ ಕಟ್ಟಿ ಹಾಕಿರುತ್ತಾರೆ ಎಂದು ತಿಳಿಸಿದಾಗ ನಾನು ನನ್ನ ತಮ್ಮ ನಂಜುಂಡಶೆಟ್ಟಿ ನಾವುಗಳು ಅಕ್ಕಪಕ್ಕದವರನ್ನು ವಿಚಾರ ಮಾಡಿದೆವು. ಬೆಳಗ್ಗೆ, ಸುಮಾರು 4-00 ಗಂಟೆಯ ಸಮಯದಲ್ಲಿ ನನ್ನ ಮಗ ಚಂದ್ರು ನಮ್ಮ ಗ್ರಾಮದ ಎಸ್ಸಿ ಜನಾಂಗದ ಬೀದಿಯ ಹತ್ತಿರ ರಸ್ತೆಯ ಪಕ್ಕದಲ್ಲಿ ಎರಡು ಕಡೆ ಹಾಕಿದ್ದ ಅಂಬೇಡ್ಕರ್ ಹೆಸರಿನ ಬೋರ್ಡ್ ಮತ್ತು ಅಂಬೇಡ್ಕರ್ ಫೋಟೋಗೆ ಸಗಣಿಯನ್ನು ಎರಚಿ ಬೋರ್ಡ್ ಸುತ್ತಲೂ ಹಾಕಿರುವ ಲೈಟ್ ಅನ್ನು ಇಟ್ಟಿಗೆಯಿಂದ ಹೊಡೆದಿರುತ್ತಾನೆಂದು ಕೆಲವರು ಗುಂಪು ಕಟ್ಟಿಕೊಂಡು ನನ್ನ ಮಗ ಚಂದ್ರುವನ್ನು ಹಿಡಿದುಕೊಂಡು ಕೈಗಳಿಂದ ಮತ್ತು ದೊಡ್ಡ, ಕಲುಗಳಿಂದ ಮುಖ, ಮೈಕೈ ಕಾಲುಗಳಿಗೆ ಹೊಡೆದು ಅಲ್ಲೆ ರಸ್ತೆಯ ಪಕ್ಕದ ಲೈಟ್ ಕಂಬಕ್ಕೆ ಕಟ್ಟಿ ಹಾಕಿ, ಅವನ ಕತ್ತಿಗೆ ಚಪ್ಪಲಿ ಹಾರ ಹಾಕಿರುತ್ತಾರೆ ಎಂದು ತಿಳಿಸಿದರು.
ನಾವು ಅಲ್ಲಿ ಜನ ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದಾರೆ ಎಂದು ತಿಳಿದು ನಾವುಗಳು ನನ್ನ ಮಗನನ್ನು ಕಟ್ಟಿಹಾಕಿದ್ದ ಸ್ಥಳಕ್ಕೆ ಹೋಗಲಿಲ್ಲ. ನಂತರ ನನ್ನ ಮಗನನ್ನು ಕಂಬಕ್ಕೆ ಕಟ್ಟಿ ಹಾಕಿರುವ ವಿಷಯ ಗೊತ್ತಾಗಿ ಯಳಂದೂರು ಪೊಲೀಸ್ ಸ್ಟೇಷನ್ ಪೊಲೀಸರು ನಮ್ಮ ಮಸಣಾಪುರ ಗ್ರಾಮಕ್ಕೆ ಬಂದು ಜನರಿಂದ ನನ್ನ ಮಗ ಚಂದ್ರುವನ್ನು ಲೈಟ್ ಕಂಬದಿಂದ ಬಿಡಿಸಿ ಚಂದ್ರುವಿಗೆ ಗಾಯವಾಗಿ ನಿಶ್ಯಕ್ತನಾಗಿದ್ದರಿಂದ ಅವನನ್ನು ಪೊಲೀಸರು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿರುತ್ತಾರೆ.
ನಂತರ ನಾನು ನಮ್ಮ ಮನೆಯವರು ಚಾಮರಾಜನಗರ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಚಂದ್ರು ಚಿಕಿತ್ಸೆ ಪಡೆಯುತ್ತಿದ್ದು, ಅವನ ಮೈಮೇಲೆ ಬಾಸುಂಡೆ ಮತ್ತು ಗಾಯಗಳನ್ನು ನೋಡಿದರೆ ನಮ್ಮ ಗ್ರಾಮದ ಜನರು ನನ್ನ ಮಗನಿಗೆ ದೊಣ್ಣೆ, ಕಲ್ಲುಗಳಿಂದ ಹೊಡೆದಿರುವಂತೆ ಕಂಡು ಬಂದಿರುತ್ತದೆ. ನನ್ನ ಮಗ ಚಂದ್ರು ಇಲ್ಲಿಯವರೆಗೂ ಸಹ ಘಟನೆಯ ಬಗ್ಗೆ ಮಾತನಾಡುತ್ತಿರುವುದಿಲ್ಲ ಆದ್ದರಿಂದ ನನ್ನ ಮಗ ಚಂದ್ರುವಿಗೆ ಗುಂಪು ಕಟ್ಟಿಕೊಂಡು ಬಂದು ಕೈಗಳಿಂದ, ದೊಡ್ಡ ಮತ್ತು ಕಲ್ಲುಗಳಿಂದ ಮುಖ, ಮೈಕೈ ಕಾಲುಗಳಿಗೆ ಹೊಡೆದು ಹಲ್ಲೆಮಾಡಿ ಕಂಬಕ್ಕೆ ಕಟ್ಟಿ ಚಪ್ಪಲಿ ಹಾರ ಹಾಕಿರುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನನ್ನ ಮಗ ಚಂದ್ರುವಿಗೆ ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಮತ್ತು ನಮ್ಮ ಮನೆಯವರೊಂದಿಗೆ ಮಾತನಾಡಿ ಈಗ ತಡವಾಗಿ ದೂರು ನೀಡಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.