ಮಾನವೀಯ ಸಮಾಜದ ಮುಂದೆ ನೆರವಿಗೆ ಮೊರೆ ಇಟ್ಟ ಪಾಲಕರು 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಮೂರು ವರ್ಷದ ಗಂಡು ಮಗು ಕಿವಿ ಕೇಳದೆ ಇರುವುದನ್ನು ನೋಡಲಾಗದೇ, ಬಡ ಕುಟುಂಬವೊಂದು ಮಾನವೀಯ ಸಮಾಜದ ಮುಂದೆ ನೆರವಿಗೆ ಮೊರೆಯಿಟ್ಟಿದ್ದಾರೆ.

ಹೌದು ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ನಿವಾಸಿಯಾದ ಬಿಳಿಗಿರಿರಂಗನಾಯಕ ಮತ್ತು ಚೈತ್ರಾ ಅವರ ದಂಪತಿಗಳ ಗಂಡು ಮಗುವಿನ ಎರಡು ಕಿವಿಗಳು ಕೇಳಿಸದೇ ಇರುವುದರಿಂದ ಕುಟುಂಬ ಸಾಕಷ್ಟು ಯಾತನೆ ಅನುಭವಿಸುತ್ತಿತ್ತು. ಊರಿನ ಹಿರಿಯರ ಮಾರ್ಗದರ್ಶನದಂತೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ತೋರಿಸಿದ್ದು, ಶಸ್ತ್ರಚಿಕಿತ್ಸೆ ಮಾಡಿದರೇ ಎರಡು ಕಿವಿಗಳು ಕೇಳುವಂತೆ ಮಾಡಬಹುದು ಎಂಬ ವೈದ್ಯರ ಮಾತುಗಳು ದಂಪತಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಪ್ಯಾಸೆಂಜರ್ ಆಟೋ ಓಡಿಸಿಕೊಂಡು ಜೀವನ ನೂಕುತ್ತಿರುವ ಬಿಳಿಗಿರಿರಂಗನಾಯಕ ಮಗುವಿಗೆ ಹೇಗಾದರೂ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ನಿರ್ಧರಿಸಿದ್ದಾರೆ. ಆದರೆ ಒಂದು ಕಿವಿ ಕೇಳುವಂತೆ ಮಾಡಲೇ 9-10 ಲಕ್ಷ ರೂ, ಹಣ ಖರ್ಚಾಗುತ್ತದೆ ಎಂಬುದನ್ನು ಕೇಳಿ ಆತ್ಮ ವಿಶ್ವಾಸವನ್ನು ಕಳೆದುಕೊಂಡಿದ್ದರು. ಆದರೆ ಮಾನವೀಯ ಸಮಾಜದ ಮುಂದೆ ನೆರವಿಗೆ ಕೈಚಾಚಿದ್ದಾರೆ. ನನ್ನ ಮಗುವಿನ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ.

ಆರ್ಥಿಕ ನೆರವು ನೀಡುವವರು:

ಬಿಳಿಗಿರಿರಂಗನಾಯಕ: 9663296556 ಸಂಪರ್ಕಿಸುವಂತೆ ಕೋರಲಾಗಿದೆ.

Share this Article
Leave a comment