ಮುಗಿಯದ ಖಾತೆ ಹಂಚಿಕೆ ಬಿಕ್ಕಟ್ಟು – ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ

ಮಣಿಕಂಠ ಜನತಾ ರಾಯಭಾರಿ
2 Min Read

ಬೆಂಗಳೂರು: ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ರಚನೆಯಾಗಿ ದಿನಗಳೇ ಆಗಿಲ್ಲ. ಅದರೊಳಗೇ ಖಾತೆ ಹಂಚಿಕೆ ವಿಚಾರ ಕಾಂಗ್ರೆಸ್‌ನಲ್ಲಿ ಮತ್ತೆ ಬಿಕ್ಕಟ್ಟು ಸೃಷ್ಟಿಸಿದೆ. ಹಿರಿಯ ಸಚಿವ ಕೃಷ್ಣ ಬೈರೆ ಗೌಡ ದೆಹಲಿಗೆ ತೆರಳಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ದೆಹಲಿ ಪ್ರವಾಸ ಬೆಳೆಸಿದ್ದು, ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ಅಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣ ಬೈರೇಗೌಡ ಇನ್ನೂ ಖಾತೆ ವಹಿಸಿಕೊಂಡಿಲ್ಲ. ಬಿಡಿಎ ಮತ್ತು ಬಿಎಂಆರ್‌ಡಿಎ ಎರಡೂ ಪ್ರಮುಖ ಸಂಸ್ಥೆಗಳು ಸಿಎಂ ಡಿ.ಕೆ.ಶಿವಕುಮಾರ್ ಬಳಿಯೇ ಇರುವುದರಿಂದ ಖಾತೆಗೆ ಅಧಿಕಾರವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಕೃಷ್ಣ ಭೈರೇಗೌಡ ಅವರು ಈಗಾಗಲೇ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದಾರೆ. ಬಿಡಿಎ-ಬಿಎಂಆರ್‌ಡಿಎ ತಮ್ಮ ಖಾತೆಗೆ ನೀಡುವಂತೆ ಅಥವಾ ಇಲ್ಲದಿದ್ದರೆ ಖಾತೆ ಬದಲಾಯಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡುವ ನಿರೀಕ್ಷೆ ಇದೆ.

ಜೂ.5ರಂದು ಪ್ರಮಾಣವಚನ ಸ್ವೀಕರಿಸಿದ ಕೇವಲ 2 ದಿನದಲ್ಲೇ ಹಿರಿಯ ಶಾಸಕ ರಾಮಲಿಂಗ ರೆಡ್ಡಿ ಸಂಪುಟದಿಂದ ರಾಜೀನಾಮೆ ನೀಡಿದ್ದರು. ತಮಗೆ ಬೆಂಗಳೂರು ಅಭಿವೃದ್ಧಿ ಖಾತೆ ಭರವಸೆ ನೀಡಲಾಗಿತ್ತು, ಆದರೆ ನೀರಾವರಿ ಖಾತೆ ನೀಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿ ಮನವೊಲಿಸಿದ ನಂತರ ಅವರು ರಾಜೀನಾಮೆ ವಾಪಸ್ ಪಡೆದಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ದೆಹಲಿಗೆ ತೆರಳಿದ್ದಾರೆ. ನಗರಾಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ 1 ಲಕ್ಷ ಕೋಟಿ ರೂ, ಅನುದಾನ ಹಂಚಿಕೆ ವಿಚಾರ ಚರ್ಚಿಸಲು ಹೋಗಿರುವುದಾಗಿ ಅವರು ಹೇಳಿದ್ದಾರೆ. ಟಿಯರ್-2 ಮತ್ತು ಟಿಯರ್-3 ನಗರಗಳ ಅಭಿವೃದ್ಧಿ ಪ್ರಸ್ತಾವನೆ ಸಿದ್ಧಪಡಿಸುವ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುವುದಾಗಿಯೂ ತಿಳಿಸಿದ್ದಾರೆ. ನಮಗೆ ಕರೆ ಮಾಡಿದಾಗ ದೆಹಲಿಗೆ ಹೋಗುತ್ತೇವೆ. ಕರೆಯದೆ ಹೋಗುವುದು ಸರಿಯಲ್ಲ. ಅವರು ಕರೆ ಮಾಡುವುದಾಗಿ ಹೇಳಿದ್ದಾರೆ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ಹೈಕಮಾಂಡ್ ತಲೆನೋವಾದ ಖಾತೆ ಹಂಚಿಕೆ: ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ರಾಮಲಿಂಗ ರೆಡ್ಡಿ, ಕೃಷ್ಣ ಬೈರೇಗೌಡ ಮತ್ತು ಡಿಕೆಶಿ ಮೂವರ ನಡುವೆ ಎಳೆದಾಟ ನಡೆಯುತ್ತಿದೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಖಾತೆ ಹಂಚಿಕೆ ವಿಚಾರ ತಲೆಪಮನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ಇನ್ನೂ 21 ಸ್ಥಾನಗಳು ಖಾಲಿ ಇದ್ದು, ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಝಮೀರ್ ಅಹ್ಮದ್ ಖಾನ್, ಅಬ್ಬಯ್ಯ ಪ್ರಸಾದ್ ಅವರ ಬೆಂಬಲಿಗರು ದೆಹಲಿಯಲ್ಲಿ ಒತ್ತಡ ಹೇರುತ್ತಿದ್ದಾರೆ. ಕೆ.ಎಚ್. ಮುನಿಯಪ್ಪ ಅವರಂತಹ ಹಿರಿಯ ನಾಯಕರು ಹಿರಿತನಕ್ಕೆ ಮನ್ನಣೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ರಚನೆಯಾಗಿ 3 ದಿನದೊಳಗೇ ಖಾತೆ ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌ನ ಅಸಮಾಧಾನ ಹೊರಗೆ ಬಂದಿದೆ. ರಾಮಲಿಂಗ ರೆಡ್ಡಿ ಪ್ರಕರಣವನ್ನು ತಣ್ಣಗಾಗಿಸಿದರೂ, ಕೃಷ್ಣ ಬೈರೆ ಗೌಡ ಅವರ ಬಿಡಿಎ ಬೇಡಿಕೆ ಮತ್ತು ಖಾಲಿ ಇರುವ 21 ಸಚಿವ ಸ್ಥಾನಗಳ ಲಾಬಿ ಡಿಕೆಶಿ ಸರ್ಕಾರಕ್ಕೆ ಮೊದಲ ಪರೀಕ್ಷೆಯಾಗಿದೆ. ದೆಹಲಿ ಮಾತುಕತೆ ನಂತರವೇ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

Share this Article
Leave a comment