ಚಾಮರಾಜನಗರ: ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಡಾ.ಎಂ.ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ದತ್ತು ಶಾಲೆ) ಸಹಯೋಗದಲ್ಲಿ ಮೇ 25 ಸೋಮವಾರದಂದು 8ನೇ ವರ್ಷದ ಆಡು ಬಾ ನನಕಂದ ಮಕ್ಕಳ ಬೇಸಿಗೆ ಶಿಬಿರ-2026 ರಂದು ಸಮಾರೋಪ ಸಮಾರಂಭದ ಅಂಗವಾಗಿ “ನಮಗೆ ಯುದ್ಧ ಬೇಡ- ಶಾಂತಿ ಬೇಕು” ಎಂಬ ಮಕ್ಕಳ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಶಿವಕುಮಾರ ಜನ್ನೂರು ಹೊಸೂರು ತಿಳಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಂಜೆ 4.30 ಗಂಟೆಗೆ ಪ್ರಾರಂಭವಾಗುವ ವೇದಿಕೆ ಕಾರ್ಯಕ್ರಮವನ್ನು ನಾಟಕ ಅಕಾಡೆಮಿ ಸದಸ್ಯರಾದ ಡಾ.ಎಂ.ಎ.ಜಾಹೀದಾ ಉದ್ಘಾಟಿಸುವರು. ಸಾಹಿತಿ ಮಂಜು ಕೋಡಿಉಗನೆ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಶ್ರೀ ರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು , ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ಡಾ.ಎಂ.ಬಸವರಾಜೇಂದ್ರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಆರ್.ಸುರೇಶ್, ಸಾರಿಗೆ ಅಧಿಕಾರಿ ಎಸ್.ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ಎಸ್.ರಾಜು, ಸಿಮ್ಸ್ ಆಡಳಿತಾಧಿಕಾರಿ ಡಾ.ಮಾರುತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಟರಾಜು, ಸೆಸ್ಕಾಂ ಲೆಕ್ಕಾಧಿಕಾರಿ ಎನ್.ಮಹೇಶ್, ಬಿಇಓ ಹನುಮಶೆಟ್ಟಿ, ರಂಗ ನಿರ್ದೇಶಕ ಅರಸೀಕೆರೆ ಯೋಗಾನಂದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಉದ್ಯಮಿ ಉಮೇಶ್ ಕುದರ್, ಬಾಳೆಎಲೆ ವ್ಯಾಪಾರಿ ಜೆ.ಮಹೇಶ್, ರಾಷ್ಟ್ರೀಯ ಅಹಿಂದ ಸಂಘಟನೆ ಅಧ್ಯಕ್ಷ ಕೆರೆಹಳ್ಳಿ ರೇವಣ್ಣ, ಶಾಲೆಯ ಮುಖ್ಯ ಶಿಕ್ಷಕರಾದ ವಿ.ಮಹದೇವಯ್ಯ, ಎನ್.ಮಾಲಿನಿ ಭಾಗವಹಿಸುವರು ಎಂದು ಹೇಳಿದರು.
ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್ ಖಜಾಂಚಿ ಮತ್ತು ಶಿಬಿರದ ವ್ಯವಸ್ಥಾಪಕ ಶಿವಶಂಕರ ಚಟ್ಟು ಮಾತನಾಡಿ, ಕಳೆದ 40 ದಿನಗಳಿಂದ ಬೇಸಿಗೆ ಶಿಬಿರ ನಡೆದಿದ್ದು, ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಅನೇಕ ಚಟುವಟಿಕೆಗಳನ್ನು ಮಾಡಿಸಿದ್ದೇವೆ. ಅದರಂತೆ ಸಮಾರೋಪ ಸಮಾರಂಭದಲ್ಲಿ ನಮಗೆ ಯುದ್ಧ ಬೇಡ-ಶಾಂತಿ ಬೇಕು ಎಂಬ ನಾಟಕವನ್ನು ಮಕ್ಕಳು ಪ್ರದರ್ಶಿಸಲಿದ್ದಾರೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಸಿದ್ದರಾಜು ರಾಮಸಮುದ್ರ, ಮಹೇಶ್ ಕೋಲು, ರಮೇಶ್ ಪಾಪಯ್ಯ ಹಾಜರಿದ್ದರು.