ಬೆಂಗಳೂರು: ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನಕ್ಕೆ ಸಂಬಂಧಿಸಿದ ದೃಶ್ಯಗಳು ಕಾನೂನು ಬಾಹಿರವಾಗಿದೆ ಎಂದು ಚಿತ್ರನಟ ಚೇತನ್ ಖಂಡಿಸಿದ್ದಾರೆ.
ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದ ಯುವಕನನ್ನು ಕಂಬಕ್ಕೆ ಕಟ್ಟು ಹಾಕಿದ ವಿಚಾರದ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಚೇತನ್ ಅಹಿಂಸಾ ಅವರು, ಚಾಮರಾಜನಗರದಿಂದ ಬಂದಿರುವ ದೃಶ್ಯಗಳು ಆತಂಕಕಾರಿಯಾಗಿದೆ ಎಂದಿದ್ದಾರೆ
ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋಗೆ ಸಗಣಿ ಹಚ್ಚಲು ಯತ್ನಿಸಿದ್ದಾನೆ ಎನ್ನಲಾದ ಒಬ್ಬ ಯುವಕನನ್ನು ಕಂಬಕ್ಕೆ ಕಟ್ಟಿ ಜನರು ಹಲ್ಲೆ ನಡೆಸಿದ್ದಾರೆ. ಇಂತಹ ಗುಂಪು ನ್ಯಾಯ (mob justice) ಹಳೆಯ, ಕೆಟ್ಟ ಮನೋಭಾವದ್ದು, ಕಾನೂನುಬಾಹಿರವಾದದ್ದು ಹಾಗೂ ಸಂವಿಧಾನಕ್ಕೆ ಧಕ್ಕೆ ಉಂಟುಮಾಡುವಂತದ್ದು ಎಂದು ಖಂಡಿಸಿದ್ದಾರೆ.
ಕಾನೂನಿನ ಆಳ್ವಿಕೆಗೆ ಮಹತ್ವ ನೀಡಿದ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಂತಹ ಕ್ರಮವನ್ನು ಎಂದಿಗೂ ಒಪ್ಪುತ್ತಿರಲಿಲ್ಲ ಎಂದು ಕಟುವಾಗಿ ಹೇಳಿಕೊಂಡಿದ್ದಾರೆ.