ರೈತನ ಮೇಲೆ ಹುಲಿ ದಾಳಿಗೆ ಯತ್ನ, ಭಯಬೀತರಾಗಿರುವ ಗ್ರಾಮಸ್ಥರು 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ತಾಲೂಕಿನ ಬಾಗಳಿ ಗ್ರಾಮದ ಜಮೀನೊಂದಲ್ಲಿ ಹುಲಿ ರೈತನೊಬ್ಬನ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾಗಳಿ ಗ್ರಾಮದ ನಿವಾಸಿ ಪುಟ್ಟಯ್ಯ ಅವರು ಬೆಳ್ಳಂಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹುಲಿಯೊಂದು ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ರೈತ ಪುಟ್ಟಯ್ಯ ಗಾಬರಿಯಿಂದ ಎತ್ತಲೂ ಕದಲದೇ ಇದ್ದಾಗ, ಹುಲಿ ರೈತ ಪುಟ್ಟಯ್ಯ ಅವರಿಗೆ ಏನು ಮಾಡದೇ ಸಮೀಪದ ಕಬ್ಬಿನ ಗದ್ದೆಯತ್ತಾ ಹೋಗಿದೆ.

ಈ ಕುರಿತು “ಜನತಾ ರಾಯಭಾರಿ” ಯೊಂದಿಗೆ ಮುಖಂಡ ಬಾಗಳಿ ರೇವಣ್ಣ ಅವರು ಮಾತನಾಡಿ, ಬಾಗಳಿ ಗ್ರಾಮದಲ್ಲಿ ಹುಲಿರಾಯ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ರೈತಾಪಿವರ್ಗ ಭಯಭೀತರಾಗಿದ್ದು, ಅರಣ್ಯ ಇಲಾಖೆಯವರು ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

Share this Article
Leave a comment