ರೈತರು ಬಡಗಲಪುರ ನಾಗೇಂದ್ರ ಬಣವನ್ನು ತೊರೆದದ್ಯಾಕೇ ಗೊತ್ತಾ?

ಮಣಿಕಂಠ ಜನತಾ ರಾಯಭಾರಿ
2 Min Read

ಗುಂಡ್ಲುಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಡಗಲಪುರ ನಾಗೇಂದ್ರ ಬಣದಿಂದ ಸಂಪೂರ್ಣವಾಗಿ ಹೂರಗುಳಿಯುತ್ತಿದ್ದೇವೆ ಪ್ರತ್ತೇಕ ವಾಗಿ ಸಂಘಟಿತರಾಗುವ ಮೂಲಕ ಜಿಲ್ಲೆಯ ರೈತ ಪರ ಸಿದ್ದಾಂತಗಳ ಆಧಾರದ ಮೇಲೆ ಹೊಸ ಸಂಘ ರಚಿಸುವುದಾಗಿ ಹಂಗಳ ದಿಲೀಪ್ ತಿಳಿಸಿದರು

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಹಂಗಳ ದಿಲೀಪ್ ಮಾತನಾಡಿ, ಗುಂಡ್ಲುಪೇಟೆ ಸೇರಿದಂತೆ ನಾಲ್ಕು ತಾಲೂಕುಗಳ, 25 ಗ್ರಾಮ ಘಟಕಗಳಿಂದ ರೈತ ಮುಖಂಡರು ಬಡಗಲಪುರ ನಾಗೇಂದ್ರ ಬಣದ ಸಿದ್ದಾಂತಗಳಿಂದ ಬೇಸತ್ತು ಹೊರಬಂದಿದ್ದು, ಮೂಲ ರೈತಪರ ಸಿದ್ಧಾಂತಗಳನ್ನು ಉಳಿಸಿಕೊಂಡು ಎಲ್ಲರನ್ನು ಒಗ್ಗೂಡಿಸಿ ಹೊಸ ಸಂಘಟನೆಯಡಿ ರೈತರ ಪರ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.

ನಾವು ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸುವುದು ಹಾಗೂ ರೈತರ ಹಿತಾಸಕ್ತಿಗಾಗಿ ಹೋರಾಟ ನಡೆಸುವುದು ಹೊಸ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಪ್ರೊ.ನಂಜುಂಡಸ್ವಾಮಿ, ಅವರ ರೈತಪರ ಸಿದ್ಧಾಂತಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ರೈತ ಸಂಘದ ಚಿಹ್ನೆ ಇರುವ ಶಾಲನ್ನು ತಿರಸ್ಕರಿಸುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೂಲ ಸಿದ್ಧಾಂತ ಸಂಘದ ಸಂಕೇತವಾದ ಸಾದಾ ಶಾಲನ್ನು ಧರಿಸುತ್ತಿದ್ದವೆ ಎಂದರು

ಗುಂಡ್ಲುಪೇಟೆಯಲ್ಲಿ ಪ್ರೊ. ನಂಜುಂಡಸ್ವಾಮಿ ಅವರ ಜಯಂತಿ ಆಚರಿಸುವ ಕುರಿತು ತೀರ್ಮಾನಿಸಿದ್ದೇವು ಆದರೆ, ಬಡಗಲುಪುರ ನಾಗೇಂದ್ರ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷದ ಪರ ಅಥವಾ ವಿರುದ್ಧ ಮತ ಚಲಾಯಿಸುವಂತೆ ಸೂಚನೆ ನೀಡಿರುವುದು ಸಂಘಟನೆಯ ಉದ್ದೇಶವಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪರ ಅಥವಾ ವಿರುದ್ಧ ನಿಲುವು ತೆಗೆದುಕೊಳ್ಳುವುದು ರೈತ ಸಂಘದ ಕೆಲಸವಲ್ಲ. ಹಲವು ವರ್ಷಗಳಿಂದ ಸಂಘಕ್ಕಾಗಿ ದುಡಿದ ಕಾರ್ಯಕರ್ತರನ್ನು ಕೆಲವುರೈತ ಮುಖಂಡರು ತಮ್ಮ ವೈಯಕ್ತಿಕ ವರ್ಚಸ್ಸಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.

ಬೊಮ್ಮನಹಳ್ಳಿ ಲೋಕೇಶ್ ಮಾತನಾಡಿ, ಕಳೆದ 15 ವರ್ಷಗಳಿಂದ ರೈತ ಸಂಘದಲ್ಲಿ ಕಾರ್ಯನಿರ್ವಹಿಸಿದ್ದೇವೆ. ಆದರೆ ಸಂಘಟನೆಯೊಳಗಿನ ಬಣ ರಾಜಕೀಯ ಹಾಗೂ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿಂದ ರೈತಪರ ಹೋರಾಟ ದುರ್ಬಲವಾಗುತ್ತಿದೆ. ಇದರಿಂದಾಗಿ ಜಿಲ್ಲೆಯ 25 ಗ್ರಾಮ ಘಟಕಗಳಿಂದ ರೈತರು ಹೊರಬರುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ರೈತಪರ ಹೋರಾಟ ಬಲಿಷ್ಠವಾಗಬೇಕಾದರೆ ಎಲ್ಲ ರೈತ ಸಂಘಟನೆಗಳು ಒಂದೇ ವೇದಿಕೆಯಡಿ ಬರಬೇಕು. ಹಿರಿಯ ಮುಖಂಡರು, ರೈತರು, ಹಿರಿಯ ನ್ಯಾಯಾಧೀಶರು ಹಾಗೂ ಸಮಾಜದ ವಿವಿಧ ವರ್ಗದವರ ವಿಶ್ವಾಸದೊಂದಿಗೆ ತಾಲೂಕು ಅಧ್ಯಕ್ಷ ದಿಲೀಪ್ ಅವರ ನೇತೃತ್ವದಲ್ಲಿ ಹೊಸ ಸಂಘಟನೆ ಕಟ್ಟಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಧು, ಕುಮಾರ್ ಭೀಮನಬೀಡು, ಶಿವಮಲ್ಲು ಹೊನ್ನೇಗೌಡನಹಳ್ಳಿ, ಪುತ್ತನಪುರ ಮಹದೇವಪ್ಪ, ಮಹದೇವಶೆಟ್ಟಿ ನಿಟ್ರೆ, ಮೈದಿನ್, ರೇವಣ್ಣ ಹಿರೀಕಾಟಿ, ನಾಗರಾಜು, ಸಂತೋಷ, ಮಹದೇವಪ್ಪ ಸೇರಿದಂತೆ ಇತರರು ಹಾಜರಿದ್ದರು.

Share this Article
Leave a comment