ಶ್ರೀಶಿವನಂಕಾರೇಶ್ವರಸ್ವಾಮಿಜಾತ್ರಾ ಪ್ರಚಾರ ರಥಯಾತ್ರೆಗೆ ಚಾಲನೆ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಹೊಸೂರು ಗ್ರಾಮದಲ್ಲಿ ಶ್ರೀ ಶಿವನಂಕಾರೇಶ್ವರ ಸ್ವಾಮಿ ದೇವಸ್ಥಾನದ 17ನೇ ವರ್ಷದ ಆಷಾಡ ಮಾಸದ ಮಹಾರುದ್ರಾಭಿಷೇಕ ಕಾರ್ಯಕ್ರಮದ ಪ್ರಚಾರ ರಥಯಾತ್ರಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ  ಶ್ರೀ ಹಿರಿಮಡಿವಾಳ ಶಿವನಂಕಾರೇಶ್ವರಸ್ವಾಮಿ ಉಪಸಮಿತಿ ಅಧ್ಯಕ್ಷ ಅಂಕನಶೆಟ್ಟಿಪುರ ಸೋಮಣ್ಣ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷಯೂ ನಡೆಯುವ ಕನಕಪುರ ತಾಲೂಕಿನ, ಉಯ್ಯಬಂಳ್ಳಿ ಹೋಬಳಿಯ, ಮಡಿವಾಳ(ಸಂಗಮ) ಗ್ರಾಮದ ಶ್ರೀ ಶಿವನಂಕರೇಶ್ವಸ್ವಾಮಿ ದೇವಸ್ಥಾನದಲ್ಲಿ 17ನೇ ವರ್ಷದ ಆಷಾಡ ಮಾಸದ ಮಹಾರುದ್ರಾಭಿಷೇಕ ಕಾರ್ಯಕ್ರಮದ ಪ್ರಚಾರ ಪಡಿಸುವ ದೃಷ್ಟಿಯಿಂದ ಶ್ರೀ ಶಿವನಂಕಾರೇಶ್ವರಸ್ವಾಮಿ ಪ್ರಚಾರ ರಥಯಾತ್ರೆ ನಡೆಯಲಿದೆ.

ಚಾಮರಾಜನಗರ ಜಿಲ್ಲೆ ಮತ್ತು ತಾಳವಾಡಿ ತಾಲ್ಲೂಕಿನ ಭಾಗದಲ್ಲಿ ಶ್ರೀ ಹಿರಿಮಡಿವಾಳ ಶಿವನಂಕಾರೇಶ್ವರಸ್ವಾಮಿ ದೇವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅದರಂತೆ ಎಲ್ಲರೂ ಸೇರಿ ಶ್ರೀ ಶಿವನಂಕಾರೇಶ್ವರಸ್ವಾಮಿ ಸೇವ ಉಪಸಮಿತಿ ಮಾಡಿಕೊಂಡು ಪ್ರತಿವರ್ಷ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದೆವೆ.

ಅದರಂತೆ ಈ ಬಾರಿ ಆ.2ರ ಭಾನುವಾರ ಮತ್ತು 03ನೇ ಸೋಮವಾರ ದಂದು ಆಷಾಡಮಾಸದ ಕಾರ್ಯಕ್ರಮ ನಡೆಯಲಿದೆ ಎಂದರು.

ರಥಯಾತ್ರೆಯು ಜಿಲ್ಲಾ ಪ್ರತಿ ಗ್ರಾಮಗಳಿಗೂ ತೆರಳಿ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮದ ಬಗ್ಗೆ ಪ್ರಚಾರವನ್ನು ನೀಡಲಾಗುವುದು, ಗ್ರಾಮಗಳಲ್ಲಿ ಇರುವ ದೇವರನ ಒಕ್ಕಲಿನವರು, ಗ್ರಾಮಸ್ಥರು ಮತ್ತು ಭಕ್ತಾದಿಗಳು ರಥಾಯತ್ರೆಯನ್ನು ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ಕಾರ್ಯಕ್ರಮಕ್ಕೆ ಅವಶ್ಯಕತೆ ಇರುವ ,ತಮ್ಮಲ್ಲಿರುವ ದವಸ ಧಾನ್ಯಗಳು, ಕಾಣಿಕೆ ರೂಪದಲ್ಲಿ ಹಣವನ್ನು ನೀಡುವರು.

ಇದೇ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಎಮ್.ಬಸವಣ್ಣ(ಸುಂದ್ರಪ್ಪ), ಚಾಮುಲ್ ನಿರ್ದೇಶಕ ಹೆಚ್.ಎಸ್.ಬಸವರಾಜು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಹತ್ತುಹಳ್ಳಿ ಗೌಡ್ರು ಅಶೋಕ್, ಊರಿನ ಗೌಡಿಕೆ ನಂಜುಂಡಸ್ವಾಮಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಮಿತ್ ಕುಮಾರ್, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಶಿವರಾಜ್, ವೀರಶೈವ-ಲಿಂಗಾಯತ ಮಹಾಸಭೆ ನಿರ್ದೇಶಕ ವೈ.ಪಿ.ರಾಜೇಂದ್ರ ಪ್ರಸಾದ್, ಉಪಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಸುಂದರ್‌, ಖಜಾಂಚಿ ಸಿ.ಎಂ.ಶಿವನಂಕಾರಪ್ಪ, ಉಪಾಧ್ಯಕ್ಷರಾದ ಪುಟ್ಟಣ್ಣ, ಶಿವಕುಮಾ‌ರ್, ಸಹ ಕಾರ್ಯದರ್ಶಿ ಮಹೇಶ್‌, ಶಿವಮೂರ್ತಿ, ಉಮೇಶ್, ಮುಖಂಡರಾದ ಪ್ರಭುಸ್ವಾಮಿ, ಮೆಡಿಕಲ್ ಅಶೋಕ್, ಮಹದೇವಸ್ವಾಮಿ, ಮಸಗಪುರ ನಂದೀಶ್, ರಾಮಸಮುದ್ರ ಬಾಬು, ಚಿನ್ನಸ್ವಾಮಿ, ಕಟ್ಟಚಾಡಿ ನಾಗರಾಜಪ್ಪ, ಗುರುಸ್ವಾಮಿ, ಲೋಕೇಶ್, ಸುರೇಶ್, ಶಿವಪ್ಪ, ಸೊಸೈಟಿ ಮಹೇಶ್, ಶಿವಮಲ್ಲಪ್ಪ ಸೇರಿದಂತೆ ಸಮಿತಿಯ ನಿರ್ದೇಶಕರು, ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

Share this Article
Leave a comment