ಚಾಮರಾಜನಗರ: ರಾಜ್ಯದಲ್ಲಿ ಹಿಜಾಬ್ ವಿವಾದವನ್ನು ಬಿಜೆಪಿಯವರೇ ಸೃಷ್ಟಿಸಿರುವುದು ಎಂದು ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಹಿಂದಿನಿಂದಲೂ ಮುಸ್ಲಿಂ ಮಹಿಳೆಯರು ಹಿಜಾಬ್ ಹಾಕುತ್ತಿದ್ದರು. ಹಿಜಾಬ್ ಯಾವ ಕಾಲದಿಂದ ಇದೆ, ಈ ಹಿಜಾಬ್ ಏನಾದ್ರು ಹೊಸತಾಗಿ ಬಂದಿದ್ಯಾ? ರಾಜ್ಯದಲ್ಲಿ ಬಿಜೆಪಿಯವರೇ ಹಿಜಾಬ್ ವಿವಾದವನ್ನು ಸೃಷ್ಟಿಸಿರುವುದು ಎಂದು ತಿಳಿಸಿದರು.

ಪೆಟ್ರೋಲ್ ಡೀಸೆಲ್ ದರ 3 ರೂ ಏರಿಕೆಗೆ ಸಚಿವ ಕೆ. ವೆಂಕಟೇಶ್ ಕೆಂಡಾಮಂಡಲರಾದರು. ನರೇಂದ್ರ ಮೋದಿ ಬಡವರು ಮತ್ತು ಜನ ಸಾಮಾನ್ಯರ ಮೇಲೆ ಹೊರೆ ಹಾಕಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಭಾರಿ ಏರಿಕೆಯಾಗಿದೆ ಜನ ಹೇಗೆ ಬದುಕ ಬೇಕು? ಈಗ ಯುದ್ದ ಇದೆ ಸರಿ ಹಿಂದೆ ಯಾವ ಕಾರಣಕ್ಕೆ ಬೆಲೆ ಜಾಸ್ತಿ ಮಾಡಿದರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಎಸ್ ಐ ಆರ್ ಜೂ.20 ರಿಂದ ಕೇಂದ್ರ ನಡೆಸಲಿದೆ.ಮತದಾನ ಪರಿಷ್ಕರಣೆ ನಡೆಸಲಿ ಬೇಡ ಅಂತ ಹೇಳಿಲ್ಲ, ಆದರೆ ಸರಿಯಾಗಿ ನಡೆಸಬೇಕು. ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ತೆಗೆದು ಹಾಕಿದ್ದಾರೆ. ಬರಿ ಒಂದುವರೆ ಸಾವಿರ ಮತಗಳ ಅಂತರದಿಂದ ಸಾಕಷ್ಟು ಟಿಎಂಸಿ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದ್ದು, ಎಷ್ಟೋ ವರ್ಷಗಳ ಹಿಂದೆ ಈತರ ಬಿಸಿಲು ನೋಡಿದ್ದೆ, ಇಷ್ಟೊಂದು ಭೀಕರ ಬಿಸಿಲನ್ನು ನಾನು ನೋಡಿಯೇ ಇಲ್ಲ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಸಮಸ್ಯೆ ಹೆಚ್ಚಾಗಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಕೂಂಬಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.