ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಹನೂರು ನಿಶಾಂತ್ ಅವರಿಂದ 50 ಸಾವಿರ ದೇಣಿಗೆ

ಮಣಿಕಂಠ ಜನತಾ ರಾಯಭಾರಿ
2 Min Read

ಹನೂರು: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ 2026 ಅಕ್ಟೋಬರ್ 24 ಮತ್ತು 25, ರಂದು ನಡೆಯಲಿರುವ ಎರಡನೇ ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಹನೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಯುವ ನಾಯಕ ಹನೂರು ನಿಶಾಂತ್ ಅವರು 50 ಸಾವಿರ ರೂ. ಸಹಾಯಧನ ನೀಡಿದ್ದಾರೆ.

“ಧಮ್ಮದಿಂದ ಶಾಂತಿ… ಮಾನವತೆಯಿಂದ ವಿಶ್ವ ಕಲ್ಯಾಣ…” ಎಂಬ ಘೋಷವಾಕ್ಯದಡಿ ಹಾಗೂ “ಬುದ್ಧರ ಮಾರ್ಗ – ಉತ್ತಮ ಸಮಾಜದ ನಿರ್ಮಾಣ” ಎಂಬ ಪರಿಕಲ್ಪನೆಯೊಂದಿಗೆ ಈ ಬೃಹತ್ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ದೇಶ-ವಿದೇಶಗಳಿಂದ ಸಾವಿರಾರು ಬೌದ್ಧ ಭಿಕ್ಕುಗಳು, ಅನುಯಾಯಿಗಳು ಮತ್ತು ಚಿಂತಕರು ಆಗಮಿಸಲಿದ್ದಾರೆ.

ಗುರುವಾರ ನಡೆದ ಪೂರ್ವಭಾವಿ ಕಾರ್ಯಕ್ರಮದಲ್ಲಿ ನಿಶಾಂತ್ ಅವರ ಬೆಂಬಲಿಗರು ಸಮ್ಮೇಳನದ ಸಂಘಟಕರು ಮತ್ತು ಬೌದ್ಧ ಬಿಕ್ಕುಗಳಿಗೆ ಸಹಾಯಧನದ ಚೆಕ್ ಹಸ್ತಾಂತರಿಸಿದರು.

“ಬುದ್ಧರ ತತ್ವಗಳು ಇಂದಿಗೂ ಪ್ರಸ್ತುತ. ಶಾಂತಿ, ಸಮಾನತೆ ಅಹಿಂಸಾ , ಸಹೋದರತೆ ಮತ್ತು ಮಾನವೀಯತೆ ಈ ಐದು ಅಂಶಗಳು ಬೌದ್ಧ ಧರ್ಮದ ತಳಹದಿ. ನಮ್ಮ ಸಂವಿಧಾನದ ಆಶಯವೂ ಇದೇ ಆಗಿದೆ. ಆದ್ದರಿಂದ ಈ ಅಂತರಾಷ್ಟ್ರೀಯ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ. ನನ್ನ ಕೈಲಾದ ಸಣ್ಣ ಸಹಾಯ ಮಾಡಿದ್ದೇನೆ. ಸಮ್ಮೇಳನ ಯಶಸ್ವಿಯಾಗಲಿ” ಎಂದು ಸಮಾಜ ಸೇವಕ ನಿಶಾಂತ್ ಅವರು ಶುಭ ಹಾರೈಸಿದ್ದಾರೆ ಎಂದು ಅವರ ಆಪ್ತ ಸುರೇಶ್ ತಿಳಿಸಿದ್ದಾರೆ.

ಹನೂರು ನಿಶಾಂತ್ ಅವರು ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಾ ಬಂದಿದ್ದು, ಯುವಕರ ಪಾಲಿಗೆ ಮಾದರಿಯಾಗಿದ್ದಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜ ಸೇವಕ ನಿಶಾಂತ್ ರವರು ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ನೀಡಿರುವ ದಾನ ತುಂಬಾ ದೊಡ್ಡದು ಬೆಲೆ ಕಟ್ಟಲು ಸಾಧ್ಯವಿಲ್ಲ ಸತ್ಕಾರ್ಯಕ್ಕಾಗಿ ದಾನ ಕೊಟ್ಟಿರುವುದರಿಂದ ಅನ್ನದಾತೊ ಶುಕಿಭವ ಅಂತ ದಾನದ ಪುಣ್ಯದಿಂದ ನಿಶಾಂತ್ ರವರಿಗೆ ಸಕಲ ಸನ್ಮoಗಳ ಉಂಟಾಗಲಿ ಪರಮ ಸತ್ಯದ ಕಡೆಗೆ ನಮ್ಮ ದಮ್ಮ ಪ್ರಯಾಣ ನಡೆಯುತ್ತಿದೆ ಸಕಲ ಜೀವಿಗಳ ಹಿತಕ್ಕಾಗಿ ಒಂದಾಗಿ ಸಮಾನತೆ ಶಾಂತಿಯಿಂದ ಜೀವನ ನಡೆಸುವ ದಾರಿಯನ್ನು ಭಗವಾನ್ ಗೌತಮ ಬುದ್ದರು ನಮಗೆ ತೋರಿಸಿದ್ದಾರೆ. ಆ ದಮ್ಮವನ್ನು ನಾವೆಲ್ಲರೂ ಒಪ್ಪಿಕೊಂಡು ಜೀವನ ನಡೆಸಿದರೆ ಸುಂದರ ಬದುಕು ನಮ್ಮದಾಗುತ್ತದೆ.ಎಂದು ಪೂಜ್ಯ ಮನೋರಂಕ್ಕಿತ ಬಂತೇಜಿ ರವರು ಮಾತನಾಡಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಬೌದ್ಧ ಉಪಾಸಕ ಸಿಂಗನಲ್ಲೂರು ಸಿದ್ದರಾಜು, ಪಾಳ್ಯ ಸಿದ್ದರಾಜು ನಾಯಕ,ಅಂತರ ಸಂತೆ ನಾಗಸೇನ ಬುದ್ಧ ವಿಹಾರದ ಬಿಕ್ಕುಣಿ ಗೌತಮಿ ಮಾತಾ ಇದ್ದರು.

ವರದಿ: ನಾಗೇಂದ್ರ ಪ್ರಸಾದ್

Share this Article
Leave a comment