ಚಾಮರಾಜನಗರ: ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೃತರ ವಾರಸುದಾರರು ಇದ್ದರೇ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ಮೃತ ಅಪರಿಚಿತ ಗಂಡಸಿನ ವಯಸ್ಸು ಅಂದಾಜು 75-80 ವರ್ಷವಾಗಿದೆ. ಸುಮಾರು 5-5 ಆಡಿ ಎತ್ತರವಿದ್ದು, ಕೋಲು ಮುಖ, ಎಣ್ಣೆ ಗೆಂಪ್ಪು ಮೈ ಬಣ್ಣ, ಕ್ರುಶ ಶರೀರ, ಉದ್ದನೆ ಬಿಳಿ ಗಡ್ಡ, ಮೀಸೆ, ಉದ್ದನೇ ಬಿಳಿ ತಲೆ ಕೂದಲು ಇರುತ್ತದೆ. ಮೈ ಮೇಲೆ ಯಾವುದೇ ಬಟ್ಟೆ ವಗೈರೆ ಇರುವುದಿಲ್ಲ. ಈತ ತೊದಲುತ್ತ ಕನ್ನಡ ( ಕೊಡಗು ಭಾಷೆ ) ಮಾತನಾಡುತ್ತಿದ್ದನು.
ಮೇಲ್ಕಂಡ ಚಹರೆಗಳ ಮೃತ ಅಪರಿಚಿತ ಗಂಡಸಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸತಕ್ಕದ್ದು. ಜಿಲ್ಲಾ ಪೊಲೀಸ್: 08226-222243, ರಾಮಸಮುದ್ರ ಪೊಲೀಸ್ ಠಾಣೆ 08226-222058, ಚಾಮರಾಜನಗರ ಜಿಲ್ಲಾ ನಿಸ್ತಂತು ಕೊಠಡಿ: 08226-222383 ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
