ಚಾಮರಾಜನಗರ: ಕೆ.ಗುಡಿ ಅರಣ್ಯ ವಲಯದ ರಾಮಾಪುರ ಗಸ್ತಿನಲ್ಲಿ ಬರುವ ಅಡ್ಡದಾರಿ ಸಮೀಪದ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಕೂಳ್ಳೂರು ಕ್ರಾಸ್ ಹತ್ತಿರ ಇರುವ ಕೆ.ಗುಡಿ ಅರಣ್ಯ ವಲಯದ ರಾಮಾಪುರ ಗಸ್ತಿನಲ್ಲಿ ಬರುವ ಅಡ್ಡದಾರಿ ಹಳ್ಳದ ಕಡೆಯಲ್ಲಿ ಜೂ.6 ರಂದು ಬೆಳಿಗ್ಗೆ 7-00 ಗಂಟೆಗೆ ಅರಣ್ಯ ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ಇತರೆ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಅರಣ್ಯ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿದ್ದಾರೆ. ಈ ಸಂಬಂಧ ಅರಣ್ಯ ಪ್ರದೇಶದಲ್ಲಿ ಪರಿಶೀಲಿಸಲಾಗಿ ರಾಮಾಪುರ ಗಸ್ತಿನ ಅರಣ್ಯದಲ್ಲಿ ಮಳೆ ನೀರು ಹರಿಯುವಂತ ಹಳ್ಳವಾದ ಅಡ್ಡದಾರಿ ಹಳ್ಳದಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ಅಂದಾಜು ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ಗಂಡಸ್ಸಿನ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಅಪರಿಚಿತ ಮೃತ ಗಂಡಸು ಸುಮಾರು 25 ದಿನಗಳು ಅಥವಾ 1 ತಿಂಗಳ ಹಿಂದೆ ಮಳೆ ಬಂದು ಹಳ್ಳದಲ್ಲಿ ನೀರು ಹರಿಯುವಾಗ ಬಹಿರ್ದೇಸೆಗೆ ಹೋಗಿ ನೀರು ತೆಗೆದುಕೊಳ್ಳಲು ಹೋಗಿಯೋ ಅಥವಾ ಮಳೆ ಬಂದು ನೀರು ದಾರಿಯಲ್ಲಿ ಹರಿಯುವಾಗ ರಸ್ತೆ ದಾಟಲು ಹೋಗಿಯೋ ನೀರಿನಲ್ಲಿ ಬಿದ್ದು ಮೃತಪಟ್ಟಿರಬಹುದಾಗಿದ್ದು, ಮೃತ ದೇಹವು ಕೊಳೆತು ಗುರುತು ಸಿಗದ ಸ್ಥಿತಿಯಲ್ಲಿದ್ದು, ಮೃತ ದೇಹದ ಮೈ ಮೇಲೆ ನೀಲಿ ಬಣ್ಣ ಜೀನ್ಸ್ ಪ್ಯಾಂಟ್, ಅಂಡರ್ ವೇರ್, ತುಂಬುತೋಳಿನ ಶರ್ಟ್ ಇದೆ.
ಮೇಲ್ಕಂಡ ಚಹರೆವುಳ್ಳ ಮೃತ ಅಪರಿಚಿತ ಗಂಡಸಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸತಕ್ಕದ್ದು ಎಂದು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು: 08226-222243, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ: 08226-222058, ಚಾಮರಾಜನಗರ ಜಿಲ್ಲಾ ನಿಸ್ತಂತು ಕೊಠಡಿ: 08226-222383