ಅರ್ಜೆಂಟಿನಾ ವಿರುದ್ಧ ರೋಚಕ ಫೈನಲ್: ಸ್ಪೇನ್‌ಗೆ ಎರಡನೇ ವಿಶ್ವಕಪ್!

ಮಣಿಕಂಠ ಜನತಾ ರಾಯಭಾರಿ
2 Min Read

ನ್ಯೂಜೆರ್ಸಿ: ಅರ್ಜೆಂಟಿನಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡ ಸ್ಪೇನ್ ಗೆಲುವು ಸಾಧಿಸುವ ಮೂಲಕ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

ಅಮೇರಿಕಾದ ನ್ಯೂಜೆರ್ಸಿ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಫಾ ಪುರುಷರ ವಿಶ್ವಕಪ್ -2026 ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಗೋಲ್ ನೊಂದಿಗೆ 16 ವರ್ಷಗಳ ಬಳಿಕ ಸ್ಪೇನ್ ಮತ್ತೊಮ್ಮೆ ವಿಶ್ವಕಪ್ ಮುಡಿಗೇರಿಸಿಕೊಂಡಿತು. 2010ರ ಬಳಿಕ ಇದೀಗ 2026ರಲ್ಲಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಸ್ಪೇನ್ ಹೊರಹೊಮ್ಮಿತು.

ಈ ಹಿಂದೆ ಚಾಂಪಿಯನ್ ಆಗಿದ್ಧ ಅರ್ಜೆಂಟಿನಾ ಮತ್ತು ಬಲಿಷ್ಠ ಸ್ಪೇನ್ ತಂಡಗಳ ಫೈನಲ್ ಹಣಾಹಣಿ ರೋಚಕವಾಗಿತ್ತು. 90 ನಿಮಿಷಗಳಲ್ಲಿ ಎರಡೂ ತಂಡಗಳು ಗೋಲ್ ಮಾಡದೆ ಡ್ರಾ ಪಂದ್ಯ ಡ್ರಾ ಆಯಿತು. ಸ್ಪೇನ್ ಪಂದ್ಯದಾದ್ಯಂತ ಪ್ರಾಬಲ್ಯ ಸಾಧಿಸಿತು. ಸ್ಪೇನ್ ಸುಮಾರು 20 ಶಾಟ್ ಗಳಿಸಿದರೆ ಅರ್ಜೆಂಟಿನಾ ಕೇವಲ 2 ಶಾಟ್ ಗಳಿಗೆ ಮಾತ್ರ ಸೀಮಿತವಾಯಿತು. ಆದರೆ 93ನೇ ನಿಮಿಷದಲ್ಲಿ ಅರ್ಜೆಂಟಿನಾದ ಎಂಜೋ ಫರ್ನಾಂಡೀಸ್ 2ನೇ ಹಳದಿ ಕಾರ್ಡ್ ಪಡೆದು ಹೊರಹೋದರು. ಈ ಮೂಲಕ ಅರ್ಜೆಂಟಿನಾ 10 ಜನರೊಂದಿಗೆ ಆಡುವಂತಾಯಿತು.

106ನೇ ನಿಮಿಷ – ಗೋಲ್!:
ಹೆಚ್ಚುವರಿ ಸಮಯದ 2ನೇ ಅರ್ಧದ ಆರಂಭದಲ್ಲಿ ಫೆರಾನ್ ಟೋರೆಸ್ ಗೋಲ್ ಹೊಡೆದರು. ನಿಕೋ ವಿಲಿಯಮ್ಸ್ ಹೆಡ್ಡರ್ ಮಾಡಿದ ಕ್ರಾಸ್‌ನ್ನು ಟೋರೆಸ್ ವಾಲಿ ಹೊಡೆದು ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಅವರನ್ನು ವಂಚಿಸಿದರು. ಇದೇ ಪಂದ್ಯದ ಏಕೈಕ ಗೋಲ್ ಆಗಿ ಉಳಿಯಿತು. ಅರ್ಜೆಂಟಿನಾ ಕೊನೆಯಲ್ಲಿ ಒತ್ತಡ ಹೇರಿದರೂ ಸ್ಪೇನ್ ರಕ್ಷಣೆ ಭೇದಿಸಲು ಸಾಧ್ಯವಾಗಲಿಲ್ಲ.

ಸ್ಪೇನ್ ಈ ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ ಕೇವಲ 1 ಗೋಲ್ ಮಾತ್ರ ಬಿಟ್ಟುಕೊಟ್ಟು ವಿಶ್ವಕಪ್ ದಾಖಲೆ ಬರೆಯಿತು. ಒಂದೇ ಟೂರ್ನಿಯಲ್ಲಿ 7 ಬಾರಿ ಗೋಲ್ ಬಿಡದ ತಂಡ ಎಂಬ ದಾಖಲೆಗೂ ಸ್ಪೇನ್ ತಂಡ ಭಾಜನವಾಯಿತು. ಇನ್ನೂ 39 ವರ್ಷದ ಲಿಯೋನೆಲ್ ಮೆಸ್ಸಿ ಫೈನಲ್‌ನಲ್ಲಿ ಗೋಲ್ ಮಾಡಲು ಸಾಧ್ಯವಾಗಲಿಲ್ಲ. ಇದು ಅವರ ಕೊನೆಯ ವಿಶ್ವಕಪ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಪಂದ್ಯದ ಬಳಿಕ 19 ವರ್ಷದ ಲಮಿನ್ ಯಮಲ್ ಮೆಸ್ಸಿ ಅವರನ್ನು ತಬ್ಬಿಕೊಂಡು ಮಾತನಾಡಿದ ದೃಶ್ಯ ಗಾಯನ ಸೆಳೆಯಿತು.

Share this Article
Leave a comment