ಉಪ್ಪಾರ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಬಂಪರ್ ಆಫರ್

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘ (ರಿ) ವತಿಯಿಂದ 2024-25 ಹಾಗೂ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಉಪ್ಪಾರ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ, ಒಂದು ಭಾವಚಿತ್ರ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಚಿಕ್ಕಮಹದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಗಳನ್ನು ಜೂನ್‌ 10, 2026ರೊಳಗಾಗಿ ಈ ಕೆಳಕಂಡವರ ಬಳಿ ಸಲ್ಲಿಸಬಹುದಾಗಿದೆ. ಸೋಮಣ್ಣ ಶಿಕ್ಷಕರು, ಚಾಮರಾಜನಗರ (9886824852), ರೇಚಣ್ಣ ಶಿಕ್ಷಕರು, ಯಳಂದೂರು (9964156517), ಮಲ್ಲು ಶಿಕ್ಷಕರು, ಗುಂಡ್ಲುಪೇಟೆ (9164898310), ಮಾದೇಶ್ ಶಿಕ್ಷಕರು, ಹನೂರು ಮತ್ತು ಕೊಳ್ಳೇಗಾಲ (9972835089) ಇವರನ್ನು ಸಂಪರ್ಕಿಸಬಹುದು.

ಅಂಚೆ ಮೂಲಕ ಕಳುಹಿಸುವವರು ಎಂ. ಚಿಕ್ಕಮಹದೇವ, ಗಿರಿಪ್ರಸಾದ್ ನಿಲಯ, ಭಗೀರಥ ನಗರ, ಚಾಮರಾಜನಗರ ಟೌನ್, ಚಾಮರಾಜನಗರ – 571313 ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪಿ. ಗೋವಿಂದರಾಜು ಶಿಕ್ಷಕರು (9945898796) ಹಾಗೂ ಎಂ. ಚಿಕ್ಕಮಹದೇವ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಪ್ಪಾರ ಸಂಘ, ಚಾಮರಾಜನಗರ (9902039341) ಅವರನ್ನು ಸಂಪರ್ಕಿಸಬಹುದಾಗಿದೆ.

Share this Article
Leave a comment