ಚಾಮರಾಜನಗರ: ತಾಲೂಕು ಕಟ್ನವಾಡಿ ಗ್ರಾಮದಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಶ್ರೀ ಮಠದ ಮುಂಭಾಗದಿಂದ ಹೊರಟ ಶ್ರೀ ಬಸವೇಶ್ವರ ಮೆರವಣಿಗೆಗೆ ಮರಿಯಾಲದ ಶ್ರೀ ಇಮ್ಮಡಿ ಮರುಘರಾಜೇಂದ್ರಸ್ವಾಮೀಜಿ, ಚಾಮರಾಜನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ, ಕಬ್ಬಹಳ್ಳಿ ಮಠದ ಶ್ರೀ ಮಹದೇವಸ್ವಾಮೀಜಿ ಅವರು ಬಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳು, ನಂದಿಧ್ವಜ, ವೀರಗಾಸೆ, ಮಂಗಳ ವಾದ್ಯಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಯುವಕರು ಮತ್ತು ಮುಖಂಡರು ಭಾಗವಹಿಸಿದ್ದರು.