ಚಾಮರಾಜನಗರ: ತಾಲೂಕಿನ ವ್ಯಾಪ್ತಿಯಲ್ಲಿ ಹುಲಿ ದಾಳಿ ಹೆಚ್ಚಾಗುತ್ತಿದ್ದು, ಶನಿವಾರ ಬೆಳ್ಳಂಬೆಳಿಗ್ಗೆ ಹುಲಿ ದಾಳಿಗೆ ಕರುವೊಂದು ಬಲಿಯಾಗಿದೆ.
ತಾಲೂಕಿನ ಕೋಡಿಉಗನೆ ಗ್ರಾಮದ ಬೆಂಜಮಿನ್ ದೇವದಾಸ್ ಎಂಬುವವರಿಗೆ ಸೇರಿದ ದೊಡ್ಡ ಹಳ್ಳ ಜಮೀನಿನಲ್ಲಿ ಹೆಣ್ಣು ಕರುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಕರುವನ್ನು ಅರ್ಧಂಬರ್ಧ ತಿಂದು ಹೋಗಿದೆ.
ಈ ಭಾಗದಲ್ಲಿ ಇತ್ತೀಚೆಗೆ ಆಗಾಗ್ಗೆ ಹುಲಿ ದಾಳಿ ನಡೆಯುತ್ತಿದ್ದು, ಸುತ್ತಮುತ್ತಲಿನ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯವರು ತಕ್ಷಣ ಹುಲಿ ಸೆರೆಗೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.