ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಅಪನಂಬಿಕೆ ಬೇಡ: ಸಿಎಂ 

ಮಣಿಕಂಠ ಜನತಾ ರಾಯಭಾರಿ
1 Min Read

ಬುದ್ಧನ ಸಂದೇಶದಂತೆ ಮಾನವೀಯತೆ, ಶಾಂತಿ ಮತ್ತು ಅಭಿವೃದ್ಧಿಗೆ ಆದ್ಯತೆ

ಚಾಮರಾಜನಗರ, ಅ.25: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಬೇಡ. ನಾವು ಪರಿಶುದ್ಧವಾಗಿ ಪ್ರಾರ್ಥನೆ, ನಂಬಿಕೆಯಿಂದ ನಡೆಯುವುದು ಮುಖ್ಯ. ನಾವು ಯಾವುದೇ ತಪ್ಪು ಮಾಡದೇ ದೇವರ ಬಳಿ ಒಳ್ಳೆಯದನ್ನೇ ಪ್ರಾರ್ಥಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದರು. ಅವರು ಉತ್ತಮ ಆಡಳಿತವನ್ನೂ ನಡೆಸಿದ್ದಾರೆ. ಹೀಗಿರುವಾಗ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತಿಗೆ ಅರ್ಥವಿಲ್ಲ” ಎಂದು ತಿಳಿಸಿದರು.

ನಾವು ಇಲ್ಲಿ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಪ್ರಾರ್ಥಿಸಲು ಬಂದಿದ್ದೇವೆ. ಬುದ್ಧನ ಆಚಾರ-ವಿಚಾರಗಳನ್ನು ಸ್ಮರಿಸಿ, ಅವರ ಸಂದೇಶವನ್ನು ಅರಿತುಕೊಳ್ಳುವುದು ನಮ್ಮ ಉದ್ದೇಶ. ಬುದ್ಧರು ಜಗತ್ತಿಗೆ ಮಾನವೀಯತೆ, ತ್ಯಾಗ, ಶಾಂತಿ ಮತ್ತು ಅಭಿವೃದ್ಧಿಯ ಮಹತ್ವದ ಸಂದೇಶ ನೀಡಿದ್ದಾರೆ. ಈ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲವನ್ನೂ ಅನುಮಾನದಿಂದ ನೋಡುವ ಮನೋಭಾವ ಬೇಡ ಎಂದು ಹೇಳಿದರು.

Share this Article
Leave a comment