ಚಾಮರಾಜನಗರ: ಜಿಲ್ಲೆಯಲ್ಲಿ ಈವರೆಗೆ ಸೇವೆ ಸಲ್ಲಿಸಿರುವ ಎಲ್ಲಾ ಜಿಲ್ಲಾಧಿಕಾರಿಗಳ ಭಾವಚಿತ್ರವನ್ನು ಅಳವಡಿಸುವ ಮೂಲಕ ಜಿಲ್ಲಾಧಿಕಾರಿ ಶ್ರೀ ರೂಪಾ ಅವರು ಮಾದರಿ ನಡೆ ಅನುಸರಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಹಳ ಆಕರ್ಷಕವಾಗಿ ಈವರೆಗೂ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಎಲ್ಲಾ ಜಿಲ್ಲಾಧಿಕಾರಿಗಳ ವೈಟ್ ಅಂಡ್ ಬ್ಲಾಕ್ ಭಾವಚಿತ್ರಗಳನ್ನು ಅಳವಡಿಸಿದ್ದು, ಸಾಕಷ್ಟು ಗಮನ ಸೆಳೆಯುತ್ತಿದೆ. ಈ ವರೆಗೂ ಜಿಲ್ಲಾಧಿಕಾರಿಗಳ ಹೆಸರನ್ನಷ್ಟೇ ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ ಜಿಲ್ಲಾಧಿಕಾರಿ ಶ್ರೀ ರೂಪಾ ಅವರು ಎಲ್ಲಾ ಜಿಲ್ಲಾಧಿಕಾರಿಗಳ ಭಾವಚಿತ್ರಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ರೂಪಾ, ಹಿಂದಿನ ಜಿಲ್ಲಾಧಿಕಾರಿಯಾದ ಸಿ.ಟಿ.ಶಿಲ್ಪಾನಾಗ್, ಚಾರುಲತಾ, ಡಿ.ಎಸ್.ರಮೇಶ್, ಬಿ.ಬಿ.ಕಾವೇರಿ, ಡಾ.ಎಂ.ಆರ್.ರವಿ, ಡಾ.ಬಿ.ಸಿ.ಸತೀಶ್, ಎಸ್.ಡಿ.ಸುನೀಲ್ ಕುಮಾರ್, ಜಿ.ಆರ್.ಜೆ ದೇವಾ, ಎ.ಎಂ.ಕುಂಜಪ್ಪ, ಕೆ.ಎಚ್.ನರಸಿಂಹಮೂರ್ತಿ, ಎಂ.ವಿ.ಸಾವಿತ್ರಿ, ಹರ್ಷಗುಪ್ತ ಹಾಗೂ ಇನ್ನಿತರೆ ಜಿಲ್ಲಾಧಿಕಾರಿಗಳ ಭಾವಚಿತ್ರಗಳನ್ನು ಆಕರ್ಷಕವಾಗಿ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ನಿತ್ಯವೂ ಭೇಟಿ ನೀಡುವ ಸಾರ್ವಜನಿಕರು ಹಳೆಯ ಜಿಲ್ಲಾಧಿಕಾರಿಗಳ ಭಾವಚಿತ್ರಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.