ಜೂ.18 ರಿಂದ ಶ್ರೀ ಚಾಮರಾಜೇಶ್ವರಸ್ವಾಮಿ ಗಿರಿಜಾ ಕಲ್ಯಾಣ ಮಹೋತ್ಸವ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಐತಿಹಾಸಿಕ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರಿಗೆ ಜೂ.18 ರಿಂದ 23 ರವರೆಗೆ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಜೂ.18 ರಂದು ಸಂಜೆ 6 ಗಂಟೆಗೆ ಎಣ್ಣೆ ಅರಿಶಿನ ಪ್ರಧಾನ ಮತ್ತು ರಾತ್ರಿ 8 ಗಂಟೆಗೆ ವರಪೂಜಾ ಮಹೋತ್ಸವ ನಡೆಯಲಿದೆ. ಜೂ.19 ರಂದು ಬೆಳಗ್ಗೆ 10 ಗಂಟೆಗೆ ಅಂಕುರಾರ್ಪಣ ಸೇವೆ, ಸಂಜೆ 5 ಗಂಟೆಗೆ ಕಾಶಿಯಾತ್ರೆ ಮಹೋತ್ಸವ ಹಾಗೂ ರಾತ್ರಿ 8 ಗಂಟೆಗೆ ಅಕ್ಷತಾರೋಪಣೆ, ಧಾರಾಮಹೋತ್ಸವ, ಪ್ರಧಾನ ಹೋಮ ಮತ್ತು ಮಹಾಮಂಗಳಾರತಿ ನಡೆಯಲಿದೆ.

ಜೂ.20 ರಂದು ರಾತ್ರಿ ಉಯ್ಯಾಲೋತ್ಸವ, ಜೂ.21 ರಂದು ಪಾಕಿನಿ ಮಹೋತ್ಸವ, ಜೂ.22 ರಂದು ಗಜಾರೋಹಣ ಪೂಜೆ ಹಾಗೂ ಜೂ.23 ರಂದು ನಡೆಯುವ ದೇವತಾ ಉದ್ವಾಸನೆ, ವಿವಾಹ ದೀಕ್ಷಾ ವಿಸರ್ಜನೆ, ಸ್ಥಂಭ ಪೂಜೆ, ಶತಮಾನೋತ್ಸವದೊಂದಿಗೆ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ತೆರೆ ಬೀಳಲಿದೆ. ಪ್ರತಿದಿನ ಸಂಜೆ ಹರಿಕಥೆ ಹಾಗೂ ಇನ್ನಿತರೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಬಾರಿಯ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀಚಾಮರಾಜೇಶ್ವರಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share this Article
Leave a comment