ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಿದ್ದು ಮೇಲುಗೈ

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಮೊದಲ ಹಂತದ 13 ಸಚಿವರ ಪಟ್ಟಿಯಲ್ಲಿ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದೆ.

ಡಿ.ಕೆ.ಶಿವಕುಮಾರ್ ಅವರ ಸಂಪುಟದ ಮೊದಲ ಹಂತದ 13 ಸಚಿವರಲ್ಲಿ ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ ಇವರೆಲ್ಲ ಸಿದ್ದರಾಮಯ್ಯ ಸಂಪುಟದಲ್ಲೂ ಇದ್ದವರು. ಇವರೆಲ್ಲರಿಗೂ ಹೆಚ್ಚಾಗಿ ಹಳೆಯ ಖಾತೆಗಳನ್ನೇ ಹಂಚಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕ ಸಚಿವರು ಡಿಕೆಶಿ ನೇತೃತ್ವದಲ್ಲಿ ಉಳಿಯುವುದು ಅನುಮಾನ ಎಂಬ ಮಾತು ಇತ್ತು. ಆದ್ರೆ ಈಗ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಂಟಿಯಾಗಿ ಸಿದ್ಧಪಡಿಸಿದ ಪಟ್ಟಿಗೆ ಒಪ್ಪಿಗೆ ಕೊಟ್ಟಿದೆ. ಅಂದ್ರೆ ಸಿದ್ದು ಒತ್ತಡಕ್ಕೆ ಹೈಕಮಾಂಡ್ ಮಣಿದಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಮೊದಲ ಹಂತದ 13 ಸಚಿವರು: 

1. ಯತೀಂದ್ರ ಸಿದ್ದರಾಮಯ್ಯ

2. ಜಿ. ಪರಮೇಶ್ವರ್ – ಸಂಭಾವ್ಯ ಡಿಸಿಎಂ

3. ಕೆ.ಎಚ್. ಮುನಿಯಪ್ಪ

4. ಯು.ಟಿ. ಖಾದರ್

5. ಕೆ.ಜೆ. ಜಾರ್ಜ್

6. ಕೃಷ್ಣ ಬೈರೇಗೌಡ

7. ಎಂ.ಬಿ. ಪಾಟೀಲ್

8. ಪ್ರಿಯಾಂಕ್ ಖರ್ಗೆ

9. ಸತೀಶ್ ಜಾರಕಿಹೊಳಿ

10. ರಾಮಲಿಂಗಾರೆಡ್ಡಿ

11. ದಿನೇಶ್ ಗುಂಡೂರಾವ್

12.ಈಶ್ವರ್ ಖಂಡ್ರೆ

13.ಭೈರತಿ ಸುರೇಶ್

ಒಟ್ಟಾರೆಯಾಗಿ ಡಿಕೆಶಿ ಸಿಎಂ ಆದ್ರೂ, ಸಂಪುಟ ರಚನೆ, ಪ್ರಮುಖ ಖಾತೆ, ಡಿಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಬಣದ್ದೇ ಮೇಲುಗೈ ಸಾಧಿಸಿದೆ. 2ನೇ ಹಂತದ ವಿಸ್ತರಣೆಯಲ್ಲಿ ಡಿಕೆಶಿ ತಮ್ಮ ಹಿಡಿತ ಸಾಧಿಸುತ್ತಾರಾ ನೋಡಬೇಕು.

Share this Article
Leave a comment