“ಬುದ್ಧ ಜಗತ್ತಿನ ಶ್ರೇಷ್ಠ ಸಂತ” – ಸುತ್ತೂರು ಶ್ರೀಗಳ ಮಾತು ವೈರಲ್!

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ನಗರದ ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ‘ಬುದ್ಧ ಮತ್ತು ಬಹುತ್ವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಭಾಷಣ ಎಲ್ಲರ ಮನ ಗೆದ್ದಿದೆ.

ಸುತ್ತೂರು ಶ್ರೀಗಳು ಹೇಳಿದ್ದೇನು? ಇಲ್ಲಿದೆ ಪೂರ್ಣ ಭಾಷಣದ ಸಾರ: “ರಾಜವೈಭೋಗವನ್ನು ತೊರೆದು, ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಾರಿಯಲ್ಲಿ ಸಾಗಿದ ಬುದ್ಧ ಜಗತ್ತಿನ ಶ್ರೇಷ್ಠ ಸಂತ. ಜಗತ್ತಿನ ಎಲ್ಲ ಸಂತರು ಹಾಗೂ ಎಲ್ಲ ಧರ್ಮಗಳ ಸಂದೇಶಗಳು ಒಂದೇ ಆಗಿರುತ್ತವೆ. ಸದ್ಭಾವನೆ, ಸಚ್ಛಾರಿತ್ರ್ಯ, ಸದ್ ವ್ಯಕ್ತಿತ್ವವನ್ನು ರೂಪಿಸುವುದು, ಪರಸ್ಪರ ಪ್ರೀತಿ, ಮೈತ್ರಿ ಸಾಧಿಸುವುದು ಧರ್ಮಗಳ ಸಾರವಾಗಿದೆ. ಬುದ್ಧ ವ್ಯಕ್ತಿಯೂ ಹೌದು, ಜ್ಞಾನವೂ ಹೌದು. ದ್ವೇಷ ತೊಲಗಿ, ಜಗತ್ತು ಶಾಂತಿ ನೆಮ್ಮದಿಯಿಂದ ಇರಬೇಕಾದರೆ ಬುದ್ಧನ ತತ್ವಗಳು ಅತ್ಯಗತ್ಯವಾಗಿದೆ ಎಂದರು.

ಸುತ್ತೂರು ಶ್ರೀಗಳ ಜೊತೆಗೆ ವೇದಿಕೆಯಲ್ಲಿ ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಜಾತಿ, ಅಸ್ಪೃಶ್ಯತೆಯ ಕಂದಕದ ನಡುವೆ ಬುದ್ಧನ ಹಾದಿಯಲ್ಲಿ ನಡೆದರೆ ಮಾತ್ರ ನಾವು ಮನುಷ್ಯರಾಗುತ್ತೇವೆ ಎಂದರು.

ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಕಾಯಕ, ದಾಸೋಹ ಮತ್ತು ಬುದ್ಧನ ಕರುಣೆ, ಪ್ರಜ್ಞೆಗೆ ಸಾಮ್ಯತೆ ಇದೆ, ಇಬ್ಬರ ಗುರಿ ಒಂದೇ – ಅದು ಮಾನವೀಯತೆಯಾಗಿತ್ತು ಎಂದರು.

ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಯುಕ್ತೇಶನಂದಾಜಿ, ಮೈಸೂರು ಧರ್ಮಗುರು ಉಸ್ಮಾನ್ ಷರೀಫ್ ಸೇರಿದಂತೆ ಲ್ಲ ಧರ್ಮದ ಗುರುಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಸಮ್ಮೇಳನ ನಿಜವಾದ ಸರ್ವಧರ್ಮ ಸಮಾನತೆ ಸಾರಿತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Share this Article
Leave a comment