ಬೆಂಗಳೂರು,ಅ.11: ರಾಜ್ಯದ ಹಲವು ಭಾಗಗಳಲ್ಲಿ ಬರದ ಪರಿಸ್ಥಿತಿ, ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ, ರಾಜ್ಯದ ಸಚಿವರು ಮತ್ತು ಸಂಸದರಿಗೆ ಹೊಸ ಕಾರು ಖರೀದಿ ಮೊತ್ತ ಏರಿಕೆಯಾಗಿದೆ.
ಸಂಸದರು ಹಾಗೂ ಶಾಸಕರು ಕಾರು ಖರೀದಿ ಮಾಡಲು ನಿಗದಿಪಡಿಸಿದ್ದ ಮೊತ್ತವನ್ನು ₹26 ಲಕ್ಷದಿಂದ ₹31 ಲಕ್ಷಕ್ಕೆ ಏರಿಸಲಾಗಿದೆ. ಸಚಿವರು ಮತ್ತು ಸಂಸದರ ಹೊಸ ಕಾರು ಖರೀದಿಯ ಮೊತ್ತದಲ್ಲಿ ₹5 ಲಕ್ಷ ಏರಿಕೆ ಮಾಡಿರುವ ನಿರ್ಧಾರ ಇದೀಗ ಸಾರ್ವಜನಿಕ ವೆಚ್ಚ ಮತ್ತು ಆದ್ಯತೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.