ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಕೊಳ್ಳೇಗಾಲದ ಸರ್ಕಾರಿ ಶಾಲಾ ಶಿಕ್ಷಕಿ ಸರೋಜಮ್ಮ

ಮಣಿಕಂಠ ಜನತಾ ರಾಯಭಾರಿ
1 Min Read

ಕೊಳ್ಳೇಗಾಲ: ಸರಳ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದ ಕೊಳ್ಳೇಗಾಲ ತಾಲೂಕಿನ ಸತ್ಯಗಾಲ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸರೋಜಮ್ಮ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ

ಮೂಲತಃ ಕುಂತೂರು ಗ್ರಾಮದವರಾದ ಸರೋಜಮ್ಮ ಅವರು 1991 ಜೂ.20 ರಂದು ಶಿಕ್ಷಕಿ ವೃತ್ತಿ ಆರಂಭಿಸಿದ್ದರು. ಟಿ.ನರಸೀಪುರ ತಾಲೂಕಿನಲ್ಲಿ ಸೇವೆ ಆರಂಭಿಸಿ, 1994-2002 ರಲ್ಲಿ ಕುಂತೂರು, 2002-2016 ರಲ್ಲಿ ಸರಗೂರು ಶಾಲೆಯಲ್ಲಿ ಸೇವೆ ಸಲ್ಲಿಸಿ, 2016 ರಿಂದ ಸತ್ಯಗಾಲ ಅಗ್ರಹಾರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

35 ವರ್ಷಗಳ ಸುದೀರ್ಘ ಸೇವೆಯಲ್ಲಿ ಮಕ್ಕಳಿಗೆ ಬಿಇಒ, ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್, ಟ್ಯಾಬ್ ಮೂಲಕ ಡಿಜಿಟಲ್ ಶಿಕ್ಷಣ ನೀಡುತ್ತಾ, ವಿಜ್ಞಾನವನ್ನು ಪ್ರಯೋಗಗಳ ಮೂಲಕ ಕಲಿಸುವುದು ಇವರ ವಿಶೇಷತೆ. ದಿಶಾ ಆಪ್ ವಿಡಿಯೋ ಪಾಠಗಳನ್ನು ಸೃಷ್ಟಿಸಿ ರಾಜ್ಯದ ಲಕ್ಷಾಂತರ ಮಕ್ಕಳಿಗೆ ತಂತ್ರಜ್ಞಾನ ಮೂಲಕ ತಲುಪುವ ಪ್ರಯತ್ನ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಶಿಕ್ಸಣ ಸಚಿವ ಮಧು ಬಂಗಾರಪ್ಪ ಅವರ ಬಳಿ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಸರೋಜಮ್ಮ ಅವರು, “35 ವರ್ಷದ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ” ಎಂದಿದ್ದಾರೆ.

ಇವರ ಕಾರ್ಯಕ್ಕೆ ಚಾಮರಾಜನಗರ ಜಿಲ್ಲೆಯ ಡಿಡಿಪಿಐ ಚಂದ್ರಪಾಟೀಲ್ ಕೊಳ್ಳೇಗಾಲ ತಾಲೂಕು ಬಿಇಒ ಎಂ.ಮಂಜುಳಾ ಅವರು ಅಭಿನಂದಿಸಿ, ನಿಷ್ಠಾವಂತ ಮತ್ತು ಸೃಜನಶೀಲ ಶಿಕ್ಷಕಿ ಎಂದು ಬಣ್ಣಿಸಿದ್ದಾರೆ. ಜೊತೆಗೆ ಶಿಕ್ಷಕ ವೃಂದದವರು ಹಾಗೂ ಅವರ ಕುಟುಂಬದ ಸಂಬಂದಿಕರು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ

Share this Article
Leave a comment