2ನೇ ದಿನವೂ ಮುಂದುವರಿದ ರೈತರ ಧರಣಿ ಸತ್ಯಾಗ್ರಹ

ಮಣಿಕಂಠ ಜನತಾ ರಾಯಭಾರಿ
1 Min Read

ಕೊಳ್ಳೇಗಾಲ: ತಾಲ್ಲೂಕಿನ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಎರಡನೇ ದಿನವೂ ಮುಂದುವರೆದಿದೆ.

ಕೊಳ್ಳೇಗಾಲ ತಾಲ್ಲೂಕಿನ ಟಗರಪುರದಿಂದ ಹನೂರಿನ ಗೋಪಿನಾಥಂ ವರೆಗೂ ಗ್ರಾಮಠಾಣಾ ಗುರುತು ಮಾಡಿ ಇ-ಸ್ವತ್ತು ನೀಡುವುದು, ಕಾಲುವೆಗಳಿಗೆ ಗಲೀಜು ನೀರು ಹಾಗೂ ಯುಜಿಡಿ ನೀರು ಹರಿಸುವುದನ್ನು ತಡೆಯುವುದು ಸೇರಿದಂತೆ ಹಲವು ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿದರು.

ರೈತ ಮುಖಂಡ ರಾಮಕೃಷ್ಣ ಮಾತನಾಡಿ, ನಮ್ಮ ಎಲ್ಲಾ ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಧರಣಿಯನ್ನು ಮುಂದುವರೆಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ದಶರಥ, ರೈತ ಸಂಘದ ಅಧ್ಯಕ್ಷ ಸರಗೂರು ನಾಗರಾಜು, ಮೋಳೆ ರಾಜು, ಸರಗೂರು ವೀರಭದ್ರಸ್ವಾಮಿ, ಹಿತ್ತಲದೊಡ್ಡಿ ನಾಗರಾಜು, ರೈತ ಮುಖಂಡರು ಚಲುವನಹಳ್ಳಿ ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷರು ಮೇಘರಾಜು ಎಂ. ಪಾಲಾಕ್ಷ, ತೇರಂಬಳ್ಳಿ ಶಿವಮೂರ್ತಿ ಹಾಗೂ ಇತರರು ಇದ್ದರು.

Share this Article
Leave a comment