ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಹಳೆಯ ಆಸ್ಪತ್ರೆಯ ಬಳಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ವಾಹನದ ಮೇಲೆ ಪೊಲೀಸರು ದಾಳಿ ನಡೆಸಿ ವಾಹನ ಹಾಗೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್.ಜಯಕುಮಾರ್ ಅವರಿಗೆ ಪಟ್ಟಣದ ಹಳೆ ಆಸ್ಪತ್ರೆಯ ಬಳಿ ಅಕ್ರಮವಾಗಿ ಪಡಿತರ ತುಂಬಿದ ವಾಹನ ಇರುವುದಾಗಿ ಬಂದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಡಿತರ ಮತ್ತು ವಾಹನವನ್ನು ವಶಪಡಿಸಿಕೊಂಡಿರುತ್ತಾರೆ. ಬಳಿಕ ಗುಂಡ್ಲುಪೇಟೆ ತಾಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಎಂ.ಪಿ.ಅರವಿಂದ ಅವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಡತರ ಅಕ್ಕಿ ಎಂಬ ವರದಿ ನೀಡಿರುತ್ತಾರೆ.
ಮೇಲ್ಕಂಡ ವರದಿಯ ಆಧಾರದಂತೆ ವಾಹನದಲ್ಲಿ ತುಂಬಿದ್ದ 52,600 ರೂ, ಮೌಲ್ಯದ 35 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಹಾಗೂ ಅಕ್ಕಿ ತುಂಬಿದ್ದ ವಾಹನವನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.