ಸಲೂನ್ ಗೆ ಬಂದು ಹೇರ್ ಕಟಿಂಗ್ ಮಾಡಿಸಿಕೊಂಡ ಕೋತಿ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಜನರು ಹೇರ್ ಕಟಿಂಗ್ ಸಲೂನ್ ಗೆ ಹೋಗಿ ಕಟಿಂಗ್ ಮಾಡಿಸಿಕೊಳ್ಳುವುದು ಸಹಜ, ಆದರೆ ವಾನರ ಒಂದು ಸಲೂನ್ ಗೆ ಬಂದು ಹೇರ್ ಕಟಿಂಗ್ ಮಾಡಿಸಿಕೊಂಡಿದೆ ಎಂದರೇ ನಂಬುತ್ತೀರಾ?

ಹೌದು ನಂಬಲೇಬೇಕಾದ ಅಚ್ಚರಿಯ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ‘ದೇವು ಮೆನ್ಸ್ ಕಟಿಂಗ್ ಸಲೂನ್’ ನಲ್ಲಿ ನಡೆದಿದೆ. ಕೋತಿಯೊಂದು ಸಾಕಷ್ಟು ದಿನಗಳಿಂದ ದೇವು ಮೆನ್ಸ್ ಕಟಿಂಗ್ ಸಲೂನ್ ಮುಂದೆಯೇ ಅಡ್ಡಾಡುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದರು. ಆದರೆ ಇತ್ತೀಚೆಗೆ ಸಲೂನ್ ಒಳಗೆ ಬಂದಿದ್ದ ಕೋತಿ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ಹಲವಾರು ಚೇಷ್ಟೆಗಳನ್ನು ಮಾಡಿತ್ತು. ಈ ವೇಳೆ ಸಲೂನ್ ಮಾಲೀಕ ದೇವರಾಜು ಬಾಚಣಿಗೆಯಲ್ಲಿ ಕೋತಿಯ ತಲೆ ಬಾಚಿದ್ದಾರೆ. ಮಂಗ ಎದರಿ ಓಡಿಹೋಗಬಹುದು ಎಂದು ಭಾವಿಸಿದ್ದ ದೇವರಾಜ್ ಅವರಿಗೆ ಅಚ್ಚರಿ ಕಾದಿತ್ತು.

ದೇವರಾಜ್ ಅವರು ಬಾಚಣಿಗೆಯಿಂದ ಕೋತಿಯ ಕೂದಲು ಬಾಚುತ್ತಿರುವಾಗ ಕೋತಿ ಸೌಮ್ಯವಾಗಿ ಕುಳಿತಿರುವುದನ್ನು ಭಾವಿಸಿ ಕೋತಿಯ ತಲೆಯ ಕೂದಲನ್ನು ಕಟಿಂಗ್ ಮಾಡಿದ್ದಾರೆ. ಬಳಿಕ ಕೋತಿಯು ಯಾವುದೆ ಚೇಷ್ಟೆಗಳನ್ನು ಮಾಡದೇ ಅಲ್ಲಿಂದ ಹೊರಟು ಹೋಗಿದೆ. ಈ ವಿಷಯವನ್ನು ಗಮನಿಸಿದ ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Share this Article
Leave a comment