ಕೇಸರಿ ಶಾಲು ಯಾವುದೇ ಧರ್ಮವಲ್ಲ- ಶಾಸಕ ಸಿ.ಪುಟ್ಟರಂಗಶೆಟ್ಟಿ ಕಿಡಿ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಅನುಮತಿ ನೀಡಿ ಎಂಬ ವಿರೋಧ ಪಕ್ಷದವರ ಬೇಡಿಕೆಗೆ, ಕೇಸರಿ ಶಾಲು ಯಾವುದೇ ಧರ್ಮದಲ್ಲ ಅದು ರಾಜಕೀಯ ಪಕ್ಷದ ಚಿನ್ನೆಯಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದು ಕೊಂಡಿರುವುದು ಎಲ್ಲಾ ಧರ್ಮದ ವಿದ್ಯಾರ್ಥಿಗಳು ಶಿಸ್ತಿನ ಪ್ರಕಾರ ಅವರವರ ಧಾರ್ಮಿಕ ಚಿಹ್ನೆಗಳನ್ನು ಧರಿಸಿ ಎಂಬ ಕಾರಣಕ್ಕೆ ಅವಕಾಶ ನೀಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.

ಇತ್ತೀಚೆಗೆ ಪರೀಕ್ಷೆಯೊಂದರಲ್ಲಿ ಜನಿವಾರದ ಗಲಾಟೆ ನಡೆದಿದ್ದು, ಅದನ್ನು ಮುಂದೆ ಇಟ್ಟುಕೊಂಡು ಎಲ್ಲ ಸಮುದಾಯದವರಿಗೆ ಮುಕ್ತ ಅವಕಾಶ ನೀಡುವ ಉದ್ದೇಶದಿಂದ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಕಾಡಾ ರಾಜ್ಯದ ಎಲ್ಲಾ ಸಮುದಾಯದ ಸಂಸ್ಕೃತಿಯನ್ನು ಕಾಪಾಡಿದೆ ಎಂದರು.

ನಮ್ಮ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದಂತೆ ಕೆಲಸ ಮಾಡುತ್ತಿದೆ. ಎಲ್ಲಾ ಸಮುದಾಯದವರಿಗೆ ಅವರವರ ಸಂಸ್ಕೃತಿ ಉಳಿಸಿ ಅವರಿಗೆ ಸ್ವಾತಂತ್ರ್ಯ ನೀಡಿದ್ದೇವೆ ಎಂದರು.

Share this Article
Leave a comment