ಡಿ.ಕೆ.ಶಿ ಅಧಿಕಾರ ಸ್ವೀಕಾರಕ್ಕೆ ಕೌಂಟ್‌ಡೌನ್; ಸಂಭಾವ್ಯ ಸಚಿವರು ಇವರೇ

ಮಣಿಕಂಠ ಜನತಾ ರಾಯಭಾರಿ
1 Min Read

ದೆಹಲಿ: ಡಿ.ಕೆ. ಶಿವಕುಮಾರ್ ಅವರು ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮೊದಲ ಹಂತದಲ್ಲಿ 10-14 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೈಕಮಾಂಡ್ ಅಂತಿಮ ಅಂಕಿತ ಹಾಕಿದ ಪಟ್ಟಿ ಬಹುತೇಕ ಫೈನಲ್ ಆಗಿದೆ.

ಮೊದಲ ಹಂತದಲ್ಲಿ ಸಚಿವರಾಗುವುದು ಪಕ್ಕಾ ಎನ್ನಲಾದವರು ಡಾ. ಜಿ. ಪರಮೇಶ್ವರ್ (SC ಕೋಟಾ), ಸತೀಶ್ ಜಾರಕಿಹೊಳಿ (ST ಕೋಟಾ), ಯು.ಟಿ. ಖಾದರ್ (ಅಲ್ಪಸಂಖ್ಯಾತ ಕೋಟಾ), ಪ್ರಿಯಾಂಕ್ ಖರ್ಗೆ (ಕಲ್ಯಾಣ ಕರ್ನಾಟಕ), ಕೆ.ಜೆ. ಜಾರ್ಜ್ (ಕ್ರಿಶ್ಚಿಯನ್), ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ (ಒಕ್ಕಲಿಗ), ಲಕ್ಷ್ಮಿ ಹೆಬ್ಬಾಳ್ಕರ್ ( ಲಿಂಗಾಯತ ಮತ್ತು ಮಹಿಳಾ ಕೋಟಾ), ಎಂ.ಬಿ. ಪಾಟೀಲ್ (ಲಿಂಗಾಯತ), ದಿನೇಶ್ ಗುಂಡು ರಾವ್ (ಬ್ರಾಹ್ಮಣ ಕೋಟಾ), ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್ (ಮುಸ್ಲಿಂ ಕೋಟಾ), ರೂಪಾ ಶಶಿಧರ್ (SC ಮಹಿಳಾ ಕೋಟಾ), ಎನ್.ಎ. ಹ್ಯಾರಿಸ್ (ಮುಸ್ಲಿಂ ಕೋಟಾ) ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಯಾರು ಡಿಸಿಎಂ ಇಲ್ವಾ?
ಈ ಬಾರಿ 3-4 ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆ ಇತ್ತು. ಆದರೆ *“
ಯಾವುದೇ ಡಿಸಿಎಂ ಬೇಡಎಂದು ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಹಾಗಾಗಿ ಸದ್ಯಕ್ಕೆ ಡಿಕೆಶಿ ಒಬ್ಬರೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬಹುಮುಖ್ಯವಾಗಿ ಯು.ಟಿ. ಖಾದರ್ ಸಚಿವರಾದರೆ, ಖಾಲಿಯಾಗುವ ಸ್ಪೀಕರ್ ಹುದ್ದೆಗೆ ಎಚ್.ಕೆ.ಪಾಟೀಲ್ ಅಥವಾ ಮಹದೇವಪ್ಪ ಹೆಸರು ಮುಂಚೂಣಿಯಲ್ಲಿದೆ. ಅನುಭವದ ಆಧಾರದ ಮೇಲೆ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Share this Article
Leave a comment