ಚನ್ನಾಜಯ್ಯನಹುಂಡಿ ಗ್ರಾಮದಲ್ಲಿ 18 ಎಕರೆ ಗೋಮಾಳ ತೆರವು

ಮಣಿಕಂಠ ಜನತಾ ರಾಯಭಾರಿ
1 Min Read

ಗುಂಡ್ಲುಪೇಟೆ: ತಾಲ್ಲೂಕಿನ ಚನ್ನಾಜಯ್ಯನಹುಂಡಿ ಗ್ರಾಮದಲ್ಲಿ‌ ಸರ್ವೆ ನಂ 138 ರಲ್ಲಿ ಒತ್ತುವರಿಯಾಗಿದ್ದ ಸುಮಾರು 18 ಎಕೆರೆ .38ಗುಂಟೆ ಜಾಗವನ್ನು ತಹಶೀಲ್ದಾರ್ ಎಂ ಎಸ್ ತನ್ಮಯ್ ಆದೇಶದಂತ ರಾಜಸ್ವನಿರೀಕ್ಷಕ, ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಡಿಓ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯ ಆರಂಭಿಸಲಾಗಿತ್ತು.

ಗ್ರಾಮಕ್ಕೆ ಬಸವ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ನೀಡದೆ ಇದು ನಮ್ಮ‌ಜಾಗ ಎಂದು ಕೆಲವರು ಅನಧಿಕೃತವಾಗಿ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡಿದ್ದರು ಅನೇಕ ತಿಂಗಳ ಹೋರಾಟದ ಫಲವಾಗಿ ಕೊನೆಗೂ ಒತ್ತುವರಿ ತೆರವು ಮಾಡಲು ಶಾಸಕರು ಹಾಗೂ ತಹಶೀಲ್ದಾರ್ ರವರು ಸೂಚಿಸಿದ್ದು ಗ್ರಾಮದ ಮಕ್ಕಳು,ಯುವಕರಿಗೆ ಆಟದ ಮೈದಾನ, ಸ್ಮಶಾನ ನಿರ್ಮಾಣಕ್ಕೆ ಅನುಕೂಲವಾಗಲಿದೆ ಅಲ್ಲದೆ ಜಾನುವಾರುಗಳ ಮೇವಿಗೆ ಅನುಕೂಲವಾಗಲಿದೆ ಎಂದು ಗ್ರಾಮದ ಮುಖಂಡ ಮಲ್ಲು ರವರು ತಿಳಿಸಿದರು.

ಅನೇಕ ವರ್ಷಗಳಿಂದ ಗೋಮಾಳ ಒತ್ತುವರಿಯಾಗಿತ್ತು ಬಸವ ಭವನಕ್ಕೆ ಜಾಗ ಬಿಡದೆ ಸರ್ಕಾರಿ‌ ಜಾಗದಲ್ಲಿರುವ ಮರಗಳನ್ನು ಮಾರಾಟ ಮಾಡಿಕೊಂಡ ಪರಿಣಾಮವಾಗಿ ಕೊನೆಗೂ ಒತ್ತವರಿ ಜಾಗ ತೆರವು ಮಾಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಅಧಿಕಾರಿಗಳು ಮತ್ತಿತರರಿದ್ದರು.

Share this Article
Leave a comment