ವೆಂಕಟಯ್ಯನಛತ್ರದಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ನೂತನವಾಗಿ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ ಇಂದು ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಗ್ರಾಮದ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಮೂರ್ತಿಯನ್ನು ಮೆರವಣಿಗೆ ಮುಖಾಂತರ ಗ್ರಾಮದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನದ ಬಳಿ ತರಲಾಯಿತು.

ಕಳೆದ ಮೂರು ದಿನಗಳಿಂದ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಿದ ಯಾಗ ಶಾಲೆಯ ಪ್ರವೇಶ, ಚತುಸ್ಥಾನಾರ್ಚನೆ, ಮೂರ್ತಿ ಹೋಮ, ನಿತ್ಯಹೋಮ, ಪ್ರಾಣಪ್ರತಿಷ್ಠಾಪನಾಂಗ ಹೋಮ, ಶಾಂತಿ ಹೋಮ, ಮಹಾಪುರ್ಣಾಹುತಿ ಹೋಮಗಳು ಸೇರಿದಂತೆ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ, ಶಯ್ಯಧಿವಾಸ ಪೂಜೆ ಸೇರಿದಂತೆ ಇನ್ನಿತರ ಪೂಜೆ ಕಾರ್ಯಕ್ರಮಗಳು ನೆರವೇಯಿತು, ನಂತರ ಆಂಜನೇಯ ಸ್ವಾಮಿ ಮೂರ್ತಿಗೆ ವಿವಿಧ ರೀತಿಯ ಅಭಿಷೇಕ ನಿರ್ವಹಿಸಿ, ಅಲಂಕಾರ ಮಾಡಲಾಯಿತು ನಂತರ ವೆಂಕಟಯ್ಯನಛತ್ರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಯಜಮಾನರು, ಮಹಿಳೆಯರು, ಯುವಕರಿಗೆ, ಗ್ರಾಮಸ್ಥರು ಸೇರಿದಂತೆ ನೆರತಿದ್ದಂತ ಭಕ್ತಾದಿಗಳು ದರ್ಶನ ಪಡೆದು, ದೇವರಿಗೆ ಪೂಜೆ ಸಲ್ಲಿಸಿದರು.

ಪ್ರಮುಖ ಅರ್ಚಕ ಆಗಮಿಕರಾದ ಹುಲ್ಲುಗನ ಮುರುಡಿ ದೇವಸ್ಥಾನದ ಶ್ರೀನಿವಾಸ ರಾಗವ್ ಭಟರ್, ಶ್ರೀ ತಿರುಮಲ ಆಚಾರ್ ಜಿ.ವಿ‌, ಅಯೋದ್ಯ ಶೇಷದೇವ್ ವೋಜಾ, ಕಾರ್ತಿಕ್ ವಾದ್ಯಾರ್, ನರಸಿಂಹ ಭಟರ್, ದಿವಾಕರ ಶರ್ಮಾ, ಶ್ರೀ ಚರಣ್ ಭಟರ್ ರವರ‌ ನೇತೃತ್ವದಲ್ಲಿ ದೇವಸ್ಥಾನ ಸಂಪೂರ್ಣ ಹೋಮ, ಪೂಜೆಗಳನ್ನು ನಡೆದವು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ನೆರವೇರಿಸಿದರು.

Share this Article
Leave a comment