ಚಾಮರಾಜನಗರ: ವಿಶ್ವ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ ಕರಾಟೆ ಗಿನ್ನಿಸ್ ವಿಶ್ವ ದಾಖಲೆ ಮಾಡುವ ಕಾರ್ಯಕ್ರಮಕ್ಕೆ ಜಿಲ್ಲೆಯ ಕರಾಟೆ ತಂಡ ಭಾಗವಹಿಸಲಿದೆ.
ಚೆನ್ನೈನ ರಾಜರತ್ನ ಸ್ಟೇಡಿಯಂ ನಲ್ಲಿ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಆ.16 ರಂದು ಆಯೋಜಿಸಿರುವ ಕರಾಟೆ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಕರಾಟೆ ಪಟುಗಳು ಭಾಗವಹಿಸಲಿದ್ದಾರೆ. ಈ ವಿಶ್ವ ದಾಖಲೆ ಕಾರ್ಯಕ್ರಮಕ್ಕೆ ಚಾಮರಾಜನಗರದ ಕರಾಟೆ ತರಬೇತುದಾರರಾದ ಸೆನ್ಸಾಯ್ ನಾಗೇಂದ್ರ ಮತ್ತು ಸೆನ್ಸಾಯ್ ಗಣೇಶ್ ನೇತೃತ್ವವನ್ನೊಳಗೊಂಡ ತಂಡದವರು ಭಾಗವಹಿಸಲಿದ್ದಾರೆ.
ಈ ತಂಡದಲ್ಲಿ ರವೀಶ್, ಕೆ.ಜಿತೇಶ್, ಅನುಶ್ರೀ , ಹರ್ಷಿತಾ, ಸೃಷ್ಟಿ, ಸಾನಿಧ್ಯ, ಅಂಜಲ್ ಜೈನ್, ಸೈಯದ್ ಇಮಾಮ್ ಹುಸೇನ್, ಶಿವರಾಜು, ರೆಹಾನ್, ವೈಭವ್ ಜೈನ್, ಮಹಮದ್ ಸೈಯದ್ ಖಾನ್, ಸಾತ್ವಿಕ್ ಅವರು ಭಾಗಿಯಾಗಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಶೋಟಕಾನ್ ಸ್ಕೂಲ್ ಆಫ್ ಮಾರ್ಸಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾದ ರೆನ್ಸಿ ನಾಗರಾಜು ಹಾಗೂ ಕರಾಟೆ ಪಟುಗಳ ಪೋಷಕರು ಶುಭ ಹಾರೈಸಿದ್ದಾರೆ.