ಚಾಮರಾಜನಗರ: ನಗರದ ಬಾಬು ಜಗಜೀವನ್ ರಾವ್ ಬಡಾವಣೆಯಲ್ಲಿ ಮುಂದಿನ ಅಕ್ಟೋಬರ್ 24 ಹಾಗೂ 25 ರಂದು ನಡೆಯಲಿರುವ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದಮ್ಮ ಪಯಣದ ಟ್ಯಾಬ್ಲೋಗೆ ಬಡಾವಣೆಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರು, ಯಜಮಾನರು, ಗ್ರಾಮಸ್ಥರು ಹಾಗೂ ಮಹಿಳೆಯರು ಎಲ್ಲರೂ ಒಗ್ಗೂಡಿ ಪಯಣದ ಟ್ಯಾಬ್ಲೋವನ್ನು ಬರಮಾಡಿಕೊಂಡು ಊರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಚಾಮರಾಜನಗರ ಜಿಲ್ಲಾ ಜಗಜೀವನ್ ರಾಮ್ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹೆಚ್.ಹೆಚ್. ನಾಗರಾಜು, ಯಜಮಾನರಾದ ಲಿಂಗಣ್ಣ, ಸಿದ್ದಪ್ಪ ಹಾಗೂ ದಮ್ಮ ಪಯಣದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಿ.ಎಂ. ಕೃಷ್ಣಮೂರ್ತಿ, ಮಂಜು ಕೋಡಿಉಗನೆ, ಕುಂಬೇಶ್ವರಕಾಲೋನಿ ಕುಮಾರ್, ಬಸವಣ್ಣ, ಪುಷ್ಪ, ಮರಿಸ್ವಾಮಿ ಹಾಗೂ ಬಿಎಸ್ಐ ಅಧ್ಯಕ್ಷರಾದ ಬಸವರಾಜ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.