ಎಪಿಎಲ್- ಬಿಪಿಎಲ್ ರೇಷನ್ ಕಾರ್ಡ್ ಇ-ಕೆವೈಸಿ ಅವಧಿ ವಿಸ್ತರಣೆ? 

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ ಇದೇ ಸೆಪ್ಟೆಂಬರ್ 30ರ ಒಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ತಾಂತ್ರಿಕ ಸಮಸ್ಯೆ ಹೆಚ್ಚಿದ ಹಿನ್ನೆಲೆ ಕೆವೈಸಿ ದಿನಾಂಕ ಮುಂದೂಡಿಕೆ ಆಗುತ್ತಾ?

ರಾಜ್ಯದಲ್ಲಿ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಪರಿಷ್ಕರಣೆ ಟೆನ್ಷನ್ ಬಳಿಕ ಇದೀಗ ಪಡಿತರ ಚೀಟಿಯ ಇ-ಕೆವೈಸಿ (E-KYC) ಟೆನ್ಷನ್ ಹೆಚ್ಚಿದೆ. ಬಿಪಿಎಲ್-ಎಪಿಎಲ್ ಕಾರ್ಡ್ದಾರರು ಇ-ಕೆವೈಸಿ ಮಾಡಿಸಲು ಬೆಳಗ್ಗೆಯಿಂದ ಸಂಜೆವೆರಗೂ ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂ ನಿಂತರೂ ಕೆಲಸ ಆಗ್ತಿಲ್ಲ. ರೇಷನ್ ಕಾರ್ಡ್ (Ration Card) ಕಳೆದುಕೊಳ್ಳುವ ಭಯ ಜನರಲ್ಲಿ ಮೂಡಿದ್ದು, ಸೆಪ್ಟೆಂಬರ್ 30 ಕೆವೈಸಿ ಮಾಡಿಸಲು ಕೊನೇ ದಿನಾಂಕವಾಗಿದೆ. ತಾಂತ್ರಿಕ ಸಮಸ್ಯೆ ಆಗ್ತಿರೋ ಹಿನ್ನೆಲೆ ಇ-ಕೆವೈಸಿ ದಿನಾಂಕ ಮುಂದೂಡುವ ಬಗ್ಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ (G Parameshwar) ಬಿಗ್ ಅಪ್ಡೇಟ್ ನೀಡಿದ್ದಾರೆ.

ಇ-ಕೆವೈಸಿಗೆ ಸರ್ವರ್ ಸಮಸ್ಯೆ!

ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ ಇದೇ ಸೆಪ್ಟೆಂಬರ್ 30ರ ಒಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಆದ್ರೆ ಎಲ್ಲೆಡೆ ಸರ್ವರ್ ಸಮಸ್ಯೆ ಉಂಟಾಗಿದ್ದು, ಕೆವೈಸಿ ಮಾಡಿಸೋದೆ ಸಮಸ್ಯೆ ಆಗ್ತಿದೆ. ಹೀಗಾಗಿ ಜನರು ಆತಂಕಗೊಂಡಿದ್ದಾರೆ. ಈ ಬಗ್ಗೆ ಡಿಸಿಎಂ ಪರಮೇಶ್ವರ್ ಮಾತಾಡಿದ್ದು, ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.

ಇ-ಕೆವೈಸಿ ಬಗ್ಗೆ ದಿನಾಂಕ ವಿಸ್ತರಣೆ ಚರ್ಚೆ-

ರಾಜ್ಯದಲ್ಲಿ  ಸಾಲು ಸಾಲು ರಜೆಗಳು ಇವೆ. ಜೊತೆ ರೇಷನ್ ಕಾರ್ಡ್ ಇ-ಕೆವೈಸಿ ವೇಳೆ ತಾಂತ್ರಿಕ ಸಮಸ್ಯೆ ಬಗ್ಗೆ ನಾವು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ತಾಂತ್ರಿಕ ಸಮಸ್ಯೆ ಇರೋದ್ರಿಂದ ದಿನಾಂಕ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

Share this Article
Leave a comment