ಜಿಲ್ಲೆಯಲ್ಲಿ 64 ಕ್ರೀಡಾ ಸಂಘಗಳು ನೋಂದಣಿ 

ಮಣಿಕಂಠ ಜನತಾ ರಾಯಭಾರಿ
0 Min Read

ಚಾಮರಾಜನಗರ: ಜಿಲ್ಲೆಯಲ್ಲಿ 64 ಕ್ರೀಡಾ ಸಂಘಗಳು ನೊಂದಣಿಯಾಗಿವೆ ಎಂದು ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆ.ಡಿ.ಪಿ.ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯ ಕ್ರೀಡಾ ಇಲಾಖೆಯಲ್ಲಿ ಎಷ್ಟು ಸಂಘಗಳು ನೊಂದಣಿಯಾಗಿವೆ‌ ಮಾಹಿತಿ ಕೊಡಿ ಎಂದು ಪ್ರಶ್ನಿಸಿದ ಕ್ರೀಡಾ ಪ್ರೋತ್ಸಾಹಕ ಜಿ.ಬಂಗಾರು ಅವರ ಪ್ರಶ್ನೆಗೆ ಉತ್ತರಿಸಿದ ಸಿ.ಎಸ್.ಅರುಣ್ ಮಾಚಯ್ಯ ಅವರು ಜಿಲ್ಲೆಯಲ್ಲಿ 64 ಕ್ರೀಡಾ ಸಂಘಗಳು ನೊಂದಣಿಯಾಗಿವೆ ಎಂದು ತಿಳಿಸಿದರು.

ಬಳಿಕ ಜಿ.ಬಂಗಾರು ಅವರು ಮಾತನಾಡಿ, ಎಲ್ಲ ಕ್ರೀಡಾ ಸಂಘಗಳಿಗೆ ಸಮಾನವಾಗಿ ಪ್ರೋತ್ಸಾಹ ನೀಡಿ. ಶಿಫಾರಸ್ಸು ಮಾಡುವವರಿಗೆ ಸೌಲಭ್ಯ ನೀಡಬೇಡಿ ಎಂದು ಹೇಳಿದರು.

Share this Article
Leave a comment