ಚಾಮರಾಜನಗರ, ಅಕ್ಟೋಬರ್ 27: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 8,00,858 ಮಂದಿ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿಷಯ ತಿಳಿಸಿದರು.
ಆಗಸ್ಟ್ 24ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ 3,88,409 ಪುರುಷರು, 4,03,504 ಮಹಿಳೆಯರು, ಇತರರು 36 ಸೇರಿದಂತೆ 7,91,949 ಮತದಾರರು ಇದ್ದರು. ಇಂದು (ಅಕ್ಟೋಬರ್ 27) ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ 3,92,481 ಪುರುಷರು, 4,08,341 ಮಹಿಳೆಯರು, ಇತರರು 36 ಸೇರಿದಂತೆ 8,00,858 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯ ಬಳಿಕ 8,909 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಯವರು ವಿವರಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,01,425 ಪುರುಷರು, 1,01,241 ಮಹಿಳೆಯರು, ಇತರೆ ನಾಲ್ವರು ಸೇರಿದಂತೆ 2,02,670 ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,02,623 ಪುರುಷರು, 1,02,588 ಮಹಿಳೆಯರು, ಇತರೆ 5 ಸೇರಿದಂತೆ 2,05,216 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 95,752 ಪುರುಷರು, 1,00,323 ಮಹಿಳೆಯರು, ಇತರೆ 12 ಸೇರಿದಂತೆ 1,96,087 ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 96,682 ಪುರುಷರು, 1,01,504 ಮಹಿಳೆಯರು, ಇತರೆ 12 ಸೇರಿದಂತೆ 1,98,198 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 94,507 ಪುರುಷರು, 1,00,212 ಮಹಿಳೆಯರು, ಇತರೆ 11 ಸೇರಿದಂತೆ 1,94,730 ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 95,588 ಪುರುಷರು, 1,01,488 ಮಹಿಳೆಯರು, ಇತರೆ 11 ಸೇರಿದಂತೆ 1,97,087 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 96,725 ಪುರುಷರು, 1,01,728 ಮಹಿಳೆಯರು, ಇತರೆ 9 ಸೇರಿದಂತೆ 1,98,462 ಮತದಾರರು ಇದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 97,588 ಪುರುಷರು, 1,02,761 ಮಹಿಳೆಯರು, ಇತರೆ 8 ಸೇರಿದಂತೆ 2,00,357 ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಕರಡು ಮತಾದರರ ಪಟ್ಟಿಗೆ ಸಂಬಂಧಿಸಿದಂತೆ 7,480 ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಎಲ್ಲಾ ನೋಟಿಸ್ ಗಳ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ಬಳಿಕ 7,411 ಅರ್ಹ ಮತದಾರರು ಕಂಡು ಬಂದಿದ್ದು, ವಿಚಾರಣೆ ನಂತರ ಅಂತಿಮ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದ (ಮರಣ, ಪುನರಾವರ್ತಿತ ಮತದಾರರು, ಸ್ಥಳಾಂತರ ಹಾಗೂ ಇತರೆ ಕಾರಣಗಳಿಂದಾಗಿ) 69 ಅನರ್ಹ ಮತದಾರರು ಇದ್ದಾರೆ ಎಂದು ತಿಳಿಸಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ 12,399 ಯುವ ಮತದಾರರು (18-19 ವಯೋಮಾನ), 85 ಹಾಗೂ ಇದಕ್ಕೂ ಮೇಲ್ಪಟ್ಟ 7,942 ಹಿರಿಯ ನಾಗರಿಕ ಮತದಾರರಿದ್ದಾರೆ. 100 ಹಾಗೂ ಇದಕ್ಕಿಂತ ಮೇಲ್ಪಟ್ಟ 151 ಶತಾಯುಷಿ ಮತದಾರರು, 11280 ವಿಶೇಷ ಚೇತನ ಮತದಾರರು, 181 ಸೇವಾ ಮತದಾರರು (ಸರ್ವೀಸ್ ಓಟರ್ಸ್) ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ವಿವರಿಸಿದರು.
ಭಾರತ ಚುನಾವಣಾ ಆಯೋಗದ ಸೂಚನೆ ಅನ್ವಯ ನೊಂದಾಯಿತ ಹಾಗೂ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಪಟ್ಟಿಯ ಒಂದು ಹಾರ್ಡ್ ಪ್ರತಿ (ಮತದಾರರ ಭಾವಚಿತ್ರ ಸಹಿತ) ಹಾಗೂ ಒಂದು ಸಾಫ್ಟ್ ಪ್ರತಿ (ಮತದಾರರ ಭಾವಚಿತ್ರ ರಹಿತ) ಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ.
ಅಂತಿಮ ಮತದಾರರ ಪಟ್ಟಿಯನ್ನು ವೆಬ್ಸೈಟ್ ಲಿಂಕ್ hಣಣಠಿs://ಛಿeo.ಞಚಿಡಿಟಿಚಿಣಚಿಞಚಿ.gov.iಟಿ ಹಾಗೂ hಣಣಠಿs://ಛಿhಚಿmಚಿಡಿಚಿರಿಚಿಟಿಚಿgಚಿಡಿ.ಟಿiಛಿ.iಟಿ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.