ಬೆಂಗಳೂರು: ಪಕ್ಷಾತೀತ ಹಾಗೂ ಜನಪರ ಸುದ್ದಿ ಬಿತ್ತರದ ಮೂಲಕ ರಾಜ್ಯದ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್ ಕೇವಲ ಸುದ್ದಿಗಷ್ಟೇ ಸೀಮಿತವಾಗದೇ, ಜನಸೇವೆಯಲ್ಲೂ ತನ್ನ ಬದ್ಧತೆ ಪ್ರದರ್ಶಿಸುತ್ತಾ ಬಂದಿದೆ. ಇದೀಗ ವಾಹಿನಿಯು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಸೇವೆ ಮಾಡಿದೆ.
ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್- 2026 ಎಂಬ ಅವಾರ್ಡ್ ಕಾರ್ಯಕ್ರಮ ನಡೆಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಆರೋಗ್ಯ ಸೇವೆ, ಸಮಾಜ ಸೇವೆ, ಕೃಷಿ ಮತ್ತು ಪರಿಸರ ಸಂರಕ್ಷಣೆ, ಕ್ರೀಡೆ, ಉದ್ಯಮ ಹಾಗೂ ನವೋದ್ಯಮ, ಕಲೆ ಮತ್ತು ಸಂಸ್ಕೃತಿ, ಆಡಳಿತ ಮತ್ತು ಸಾರ್ವಜನಿಕ) ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಿದೆ.
ನಗರದ ಲಲಿತಾ ಅಶೋಕ್ ಹೋಟೆಲ್ ನಲ್ಲಿ ಆಯೋಜಿಸಡಲಾಗಿದ್ದ ಅವಾರ್ಡ್ ಕಾರ್ಯಕ್ರಮದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಮ. ನಿ. ಪ್ರ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಚಿವರಾದ ರಾಮಲಿಂಗಾರೆಡ್ಡಿ, ಯು ಟಿ ಖಾದರ್, ಸಂತೋಷ್ ಲಾಡ್, ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಉಪಸ್ಥಿತರಿದ್ದರು.
ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ, ಮಾಜಿ ಸಚಿವ ಬಿ ಸಿ ಪಾಟೀಲ್, ನಟಿ ಶುಭ ಪೂಂಜಾ, ಮ್ಯಾಕಿಸ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಅಧ್ಯಕ್ಷ ಮಾಧವ್ ಕಿರಣ್, ಬಂಡೆ ಮಹಾಕಾಳಿ ದೇವಸ್ಥಾನ ಟ್ರಸ್ಟಿ ಹಾಗೂ ನಿಮಾಪಕಿ ಜಿ ಎಸ್ ಲತಾ ಜಯಪ್ರಕಾಶ್ ಉಪಸ್ಥಿತಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಈ ವೇಳೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಹಿರಿಯ ಐಎಎಸ್ ಅಧಿಕಾರಿ, ಜಿಬಿಎ ಆಯುಕ್ತ ಕೆ ಎನ್ ರಮೇಶ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಜೀ ಕನ್ನಡ ನ್ಯೂಸ್ನ ಸಂಪಾದಕರಾದ ರವಿ ಎಸ್ ಗೌಡ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯ್ತು.

ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ ಅವಾರ್ಡ್ – 2026ರ ಪ್ರಶಸ್ತಿ ಪುರಸ್ಕೃತರು
1. ಡಾ. ಎಸ್.ಎಸ್. ಪಾಟೀಲ್ – ಹೋಮಿಯೋಪತಿ ವೈದ್ಯರು ಹಾಗೂ ಸಾಹಿತಿಗಳು
2. ಶ್ರೀ ಶೀತಲ್ ಕುಮಾರ್ – ವ್ಯವಸ್ಥಾಪಕ ನಿರ್ದೇಶಕರು, SRF & ಸೆಕ್ಯುರಿಟಿ ಸರ್ವಿಸಸ್ ಪ್ರೈ.ಲಿ.
3. ಶ್ರೀ ಸಿ.ಪಿ. ಮುತ್ತಣ್ಣ – ನಿವೃತ್ತ ಕರ್ನಲ್ & ಸಮಾಜ ಸೇವಕರು
4. ಶ್ರೀ ಡಾ. ಲಕ್ಷ್ಮೀನಾರಾಯಣಸ್ವಾಮಿ ಶಾಸ್ತ್ರೀ , ಜ್ಯೋತಿಷ್ಯರು ಮತ್ತು ವಾಸ್ತುತಜ್ಞರು
5. ಶ್ರೀಮತಿ ನಾಗಮಣಿ – ಸಮಾಜ ಸೇವಕಿ
6. ಡಾ. ವೈ.ಕೆ. ಬಾಲಕೃಷ್ಣಪ್ಪ – ಸಾಮಾಜಿಕ ಹೊರಾಟಗಾರ & ರೇಷ್ಮೆ ಇಲಾಖೆ ನಿವೃತ್ತ ಉಪ ನಿರ್ದೇಶಕರು
7. ಶ್ರೀ ಕೆ.ಎನ್.ರಮೇಶ್ – ಹಿರಿಯ IAS ಅಧಿಕಾರಿ, ಜಿಬಿಎ ಆಯುಕ್ತರು (ಜೀವಮಾನ ಸಾಧನೆ)
8. ಡಾ. ಎಂ.ಸಿ. ಸೆಂಥಿಲ್ ಕುಮಾರ್ – ಸಿದ್ಧ ಔಷಧ ತಜ್ಞರು
9. ಶ್ರೀ ವಿದ್ವಾನ್ ಎಂ. ರಾಜಣ್ಣ – ಶಿಕ್ಷಣ ಹಾಗೂ ಸಮಾಜ ಸೇವಕರು
10. ಶ್ರೀಮತಿ ಮಮತಾ ದೇವರಾಜ್ – ಸಮಾಜ ಸೇವಕಿ
11. ಶ್ರೀ ವಿಜಯ್ ಗೂರೂಜಿ – ಜ್ಯೋತಿಷ್ಯ ತಜ್ಞರು
12. ಶ್ರೀ ಜಿ.ವಿ. ಸೀತಾರಾಮು – ಸಮಾಜಸೇವಕರು & ಮಾಜಿ ಅಧ್ಯಕ್ಷರು, ಭೋವಿ ಅಭಿವೃದ್ಧಿ ನಿಗಮ
13. ಚೊಕ್ಕನಹಳ್ಳಿ ಚಂದ್ರು (ಚಿಕ್ಕಣ್ಣ) – ಕಾಂಗ್ರೆಸ್ ಮುಂಖಡರು, ಸಿ.ಎಚ್.ಬಿ ಗ್ರೂಪ್ ಸಂಸ್ಥಾಪಕರು, ಅಂಜನ್ ಅಕ್ಷಯ ಡೆವಲಪರ್ಸ್
14. ಶ್ರೀ ಹುಲ್ಲೇಶ್ ಬಜಂತ್ರಿ – ರಾಜ್ಯಾಧ್ಯಕ್ಷರು, ಕನ್ನಡ ಜನಾಭಿವೃದ್ಧಿ ವೇದಿಕೆ
15. ಶ್ರೀ ಎಂ.ಆರ್. ರಾಘವೇಂದ್ರ – ಸಮಾಜ ಸೇವಕರು, ಅಧ್ಯಕ್ಷರು, ಹೆಚ್ಎಸ್ಆರ್ ಬ್ಲಾಕ್ ಕಾಂಗ್ರೆಸ್ & ಎಂಆರ್ಆರ್ ಸಂಸ್ಥೆ ಸಂಸ್ಥಾಪಕರು
16. ಶ್ರೀ ಸೋಲೂರು ಮಹೇಶ್ – ಸಮಾಜ ಸೇವಕರು
17. ಶ್ರೀ ಎಂ. ಶಿವಕುಮಾರ್ – ಐಶ್ವರ್ಯ ಡೆವೆಲಪರ್ಸ್ ಮಾಲೀಕರು & ಸಮಾಜ ಸೇವಕರು
18. ಡಾ. ಮರಿಸ್ವಾಮಿ, ನಿವೃತ್ತ ಶಿಕ್ಷಕರು & ಸಮಾಜ ಸೇವಕರು
19. ಶ್ರೀ ಪ್ರಕಾಶ್ ಮಂಡೋತ್ – ರೈಲ್ವೆ ತಜ್ಞರು
20. ಶ್ರೀಮತಿ ಸುಮ ಕಿರಣ್ – ಸಮಾಜ ಸೇವಕರು
21. ಶ್ರೀ ರಾಜಕುಮಾರ ಮಲಕಪ್ಪ ಮಾಳಿ – ಶಿಕ್ಷಣ ಕ್ಷೇತ್ರ
22. ಶ್ರೀ ಗಿರೀಶ್ ಕಾಸರವಳ್ಳಿ – ಖ್ಯಾತ ಚಲನಚಿತ್ರ ಹಿರಿಯ ನಿರ್ದೇಶಕರು (ಜೀವಮಾನ ಸಾಧನೆ)
23. ಶ್ರೀ ಸದಾನಂದ ಬಿ. ಬಂಗೇರ – ಹೋಟೆಲ್ ಉದ್ಯಮಿ
24. ಶ್ರೀ.ಕೆ. ಸಂಜೀವ ಪೂಜಾರಿ – ಸಮಾಜ ಸೇವಕರು
25. ಶ್ರೀಮತಿ ಶಕುಂತಲಾ ಕೆ. ಬೆಲ್ಲದಾಳೆ – ಸಮಾಜ ಸೇವಕರು & ಸಹಕಾರಿ ಕ್ಷೇತ್ರದ ನಾಯಕಿ
26. ಶ್ರೀ ಶ್ರೀನಿವಾಸ್ ದಾಸಪ್ಪ – ಸಮಾಜ ಸೇವಕರು & ಉದ್ಯಮಿ
27. ಶ್ರೀ ಸೋಮಶೇಖರ್ – ಪ್ರಾಂಶುಪಾಲರು ಸರ್ಕಾರಿ ಐಟಿಐ ಕಾಲೇಜ್, ಬೆಟ್ಟದಪುರ
28. ಶ್ರೀ ಶಿವರಾಜ ಮಾರುತಿ ಬುಸಗುಂಡೆ – ಉದ್ಯಮಿ
29. ಶ್ರೀಮತಿ ಮಧುರಾ ಅಶೋಕ್ ಕುಮಾರ್ – ಗಿನ್ನಿಸ್ ದಾಖಲೆ ರಕ್ತದಾನಿ & ಸಮಾಜ ಸೇವಕರು
30. ಡಾ. ಎನ್. ನರಸಿಂಹ ಮೂರ್ತಿ – ನಟ & ನಿರ್ಮಾಪಕ, ಟೆಲಿಕಾಂ ಎಂಪ್ಲಾಯೀಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ
31. ಡಾ. ಲತಾ ಜೈಪ್ರಕಾಶ್ – ನಟಿ, ನಿರ್ಮಾಪಕಿ, ನಿರ್ದೇಶಕಿ & ಬಂಡೆ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ
“ಜೀವಮಾನ ಸಾಧನೆ ಪ್ರಶಸ್ತಿ”ಗೆ ಪಾತ್ರರಾದ ಗಿರೀಶ್ ಕಾಸರವಳ್ಳಿ ಮಾತನಾಡಿ, ನಿರ್ದೇಶಕನಾಗಿ ಕನ್ನಡ ಭಾಷೆಯ ಶಕ್ತಿಯನ್ನು ಸಿನಿಮಾದ ಮೂಲಕ ತೋರಿಸುವ ಸದವಕಾಶ ನನ್ನ ಪಾಲಿಗೆ ಒದಗಿದ್ದು ಸೌಭಾಗ್ಯ. ನಿಜವಾದ ಸಾಧಕರನ್ನು ಗುರುತಿಸುವ ಜೀ ಕನ್ನಡ ನ್ಯೂಸ್ ವಾಹಿನಿಯ ಕೆಲಸ ಮೆಚ್ಚತಕ್ಕದ್ದು, ಪುರಸ್ಕೃತರಿಗೆ ಅಭಿನಂದನೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶಿರ್ವಚನ ನೀಡಿ, ಕಾಯಕವೇ ಕೈಲಾಸ ಎನ್ನುವುದು ಪ್ರತಿಯೊಬ್ಬರ ಬದುಕಿನ ಮೂಲಮಂತ್ರವಾಗಬೇಕು. ಕಾಯಕ ನಿಷ್ಠೆ ಉಳ್ಳವರನ್ನು ಗುರುತಿಸುವುದು ಶ್ರೇಷ್ಠ ಕೆಲಸ. ಅಂತಹ ಮಾದರಿ ಕಾರ್ಯವನ್ನು ಮಾಡುತ್ತಿರುವ ಜೀ ವಾಹಿನಿಯ ಕೆಲಸವೂ ಸಾಧನೆಯೇ. ಹೀಗಾಗಿ ಜೀ ಕನ್ನಡ ನ್ಯೂಸ್ ಹಾಗೂ ಪುರಸ್ಕೃತರಿಗೆ ಅಭಿನಂದನೆ ಸಲ್ಲಬೇಕು ಎಂದು ಹೇಳಿದರು.
ರಾಮಲಿಂಗಾರೆಡ್ಡಿ, ಜೀ ವಾಹಿನಿಯು ನಿರಂತರವಾಗಿ ಸಾಧಕರನ್ನು ಸನ್ಮಾನಿಸುವ ಕೆಲಸವನ್ನು ಬಹಳ ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಸಾಧಕರನ್ನು ಹುರಿದುಂಬಿಸುವ ಈ ಪ್ರಯತ್ನ ಶ್ಲಾಘನೀಯ. ಇದೇ ಉತ್ಸಾಹದೊಂದಿಗೆ ಸಾಧಕರು ಮತ್ತಷ್ಟು ಸಾಧನೆಯ ಪ್ರಯತ್ನದಲ್ಲಿ ತೊಡಗಬೇಕು ಎಂದರು.
ಯು ಟಿ ಖಾದರ್, ಪ್ರಶಸ್ತಿ ಪುರಸ್ಕೃತರ ಸಾಧನೆಯ ಹಿಂದೆ ನಿರಂತರ ಪರಿಶ್ರಮ, ಬದ್ಧತೆ, ಸಮಾಜಮುಖಿ ಕಳಕಳಿಯ ವ್ಯಕ್ತಿತ್ವ ಅಡಗಿದೆ. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸುವ ಮೂಲಕ ಜೀ ಸಂಸ್ಥೆ ಮಾದರಿ ಕಾರ್ಯ ಮಾಡುತ್ತಿದೆ. ಪ್ರಶಸ್ತಿ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ. ಪ್ರತೀ ಸಾಧಕರ ವ್ಯಕ್ತಿತ್ವ ದಾರಿದೀಪವಾಗಲಿ ಹಾಗೂ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ತಿಳಿಸಿದರು.
ಸಂತೋಷ್ ಲಾಡ್, ಇಂತಹ ವಿಶೇಷ ಕಾರ್ಯಕ್ರಮಗಳೇ ಈಗ ಅಪರೂಪವಾಗಿವೆ. ಆದರೆ ಅಂತಹ ಅಪರೂಪದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಜೀ ವಾಹಿನಿ ಸದಾ ಮುಂಚೂಣಿ. ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪುರಸ್ಕಾರ ನೀಡಿರುವುದು ಸಂತಸದ ಸಂಗತಿ, ಎಲ್ಲಾ ಸಾಧಕರಿಗೂ ಅಭಿನಂದನೆ ಎಂದರು.
ಬಿ ಸಿ ಪಾಟೀಲ್, ನಮ್ಮ ಸಾಧನೆ ಪಥ ಭವಿಷ್ಯದಲ್ಲಿ ಮಾದರಿಯಾಗಬೇಕು, ಅಂತಹ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು. ಇಂದು ನಾವು ನೆನಪು ಮಾಡಿಕೊಳ್ಳುವ ಪ್ರತಿಯೊಬ್ಬ ಮಹನೀಯರು ಸಾಧಕರೇ, ಸಮಾಜಕ್ಕೆ ಕೊಡುಗೆ ಕೊಟ್ಟವರಷ್ಟೇ ಸ್ಮರಣೀಯರಾಗಿ ಉಳಿಯುತ್ತಾರೆ. ಅದೇ ರೀತಿ ಜೀ ವಾಹಿನಿಯು ಅಂತಹ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ತಮ್ಮ ಕೆಲಸಗಳನ್ನು ಗುರುತಿಸಿದಾಗ ಮಾತ್ರ ಸಾಧಕರಿಗೆ ಇನ್ನಷ್ಟು ಪ್ರೋತ್ಸಾಹ ದೊರೆಯುತ್ತದೆ. ಆ ಕೆಲಸವನ್ನು ವಾಹಿನಿ ನಿರಂತರವಾಗಿ ಮಾಡುತ್ತಾ ಬಂದಿರುವುದು ಅಭಿನಂದನಾರ್ಹ ಎಂದರು.