ನಗರಸಭೆ ನಿರ್ಲಕ್ಷ್ಯಕ್ಕೆ ಸಾವಿರಾರು ಮೀನುಗಳು ಮೃತ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ನಗರಸಭೆ ನಿರ್ಲಕ್ಷ್ಯದಿಂದ ಕೆರೆಯೊಂದರಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂಬ ಆರೋಪ ಕೇಳಿಬಂದಿದೆ.

ನಗರದ ಸಮೀಪದಲ್ಲಿರುವ ಮೂಡ್ಲುಪುರ ಗ್ರಾಮದ ಕೆರೆಯಲ್ಲಿ ರೈತರು ಕೆರೆಗೆ ಮೀನುಗಳನ್ನು ಬಿಟ್ಟಿದ್ದರು. ಆದರೆ ನಗರಸಭೆ ಒಳಚರಂಡಿಯ ಕೊಳಚೆ ನೀರು ಕೆರೆಗೆ ಸೇರುವ ಮೂಲಕ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂದು ರೈತ ಮುಖಂಡ ಹಾಲಿನ ನಾಗರಾಜು ಆರೋಪಿಸಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಮೂಡ್ಲುಪುರ ಕೆರೆಗೆ ಒಳಚರಂಡಿ ಪೈಪ್ ಲೈನ್ ಹೊಡೆದು ಕೊಳಚೆ ನೀರು ಸೇರುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೂ ಈ ಹಿಂದೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಕ್ರಮವಹಿಸದೇ ಇರುವುದರಿಂದ ಕೆರೆಗೆ ಒಳಚರಂಡಿ ನೀರು ಸೇರಿ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂದು ದೂರಿದರು.

ಈವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಕೆರೆಯ ನೀರು ಕುಡಿದು ದನ-ಕರುಗಳು ಮೃತಪಟ್ಟರೆ ನಗರಸಭೆಯ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share this Article
Leave a comment