*ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದ ಧಮ್ಮ ಪಯಣ ಕಾರ್ಯಕ್ರಮ
*ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಅವರಿಂದ ವೈಯಕ್ತಿಕ 10 ಸಾವಿರ ರೂ, ಧಮ್ಮದಾನ
ಚಾಮರಾಜನಗರ: ಜಿಲ್ಲೆಯಲ್ಲಿ ಅ.24, 25 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಅಂಗವಾಗಿ ನಡೆಯುತ್ತಿರುವ ಧಮ್ಮ ಪಯಣ ಜಾಗೃತಿ ಜಾಥಾ ಸರ್ವ ಜಾತಿ-ಧರ್ಮಗಳ ಭಾವೈಕ್ಯತೆಗೆ ಸಾಕ್ಷಿಯಾಗುತ್ತಿದೆ.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಇಂದು ನಡೆದ (ಸೆ.27 ಭಾನುವಾರ) ಧಮ್ಮ ಪಯಣ ಜಾಗೃತಿ ಜಾಥಾ ನಾಯಕ ಸಮುದಾಯದ ಬಡಾವಣೆಗೆ ಬಂದ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಅವರ ನೇತೃತ್ವದಲ್ಲಿ ನಾಯಕ ಸಮುದಾಯದ ಬೀದಿಯ ಯಜಮಾನರು, ಮುಖಂಡರು ಟ್ಯಾಬ್ಲೋವನ್ನು ವಿಜೃಂಭಣೆಯಿಂದ ಬರಮಾಡಿಕೊಂಡರು. ಬಳಿಕ ಪುಷ್ಪಾರ್ಚನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡ ಎಚ್.ವಿ.ಚಂದ್ರು ಅವರು ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ವೈಯಕ್ತಿಕವಾಗಿ 10 ಸಾವಿರ ರೂ, ದೇಣಿಗೆ ನೀಡುವ ಮೂಲಕ ದಮ್ಮದಾನವನ್ನು ನೀಡಿದರು. ಈ ವೇಳೆ ನಾಯಕ ಸಮುದಾಯದ ಯಜಮಾನರಾದ ಬಾಲ ನಾಯಕ, ಸೇರೆಗಾರ ಚಿನ್ನಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟಸ್ವಾಮಿ, ರಂಗಸ್ವಾಮಿ, ಮುಖಂಡರಾದ ಶಿವಣ್ಣ ನಾಯಕ, ರಾಜಣ್ಣ ನಾಯಕ ಹಾಜರಿದ್ದರು.
ಈ ದಿನದ ಮೆರವಣಿಗೆ ಉಸ್ತುವಾರಿಯನ್ನು ಗ್ರಾಮದ ಗಡಿ ಯಜಮಾನರಾದ ವೀರಣ್ಣ, ಗ್ಯಾರಂಟಿ ಯೋಜನೆಯ ತಾಲೂಕು ಸದಸ್ಯ ಜಯರಾಜ್, ಕೆಂಪರಾಜು, ನಾಗಯ್ಯ, ನಾಗರಾಜು, ಪುಟ್ಟನಜಯ್ಯ, ಶಿವರಾಮ, ಶ್ರೀಧರ, ಮಾಜಿ ತಾ. ಪಂ. ಸದಸ್ಯರಾದ ಸಿ.ಮಹಾದೇವ, ಪುಟ್ಟಸ್ವಾಮಿ, ನಂಜುಂಡಸ್ವಾಮಿ, ಉಪಾಸಕ ದಂಪತಿಗಳಾದ ಮಹದೇವಮ್ಮ, ಶಂಕರ್ ಬೆಂಡರಹಳ್ಳಿ, ಕೆಸ್ತೂರು ಕೇಶವಮೂರ್ತಿ, ಮುಖಂಡರಾದ ಮಣಿ, ಸಮ್ಮೇಳನದ ಪ್ರಚಾರ ಸಮಿತಿ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ಸಾಹಿತಿ ಮಂಜುಕೋಡಿ ಉಗನೆ , ಮಿಮಿಕ್ರಿ ಮಲ್ಲಣ್ಣ, ದೊಡ್ಡರಾಯಪೇಟೆ ಮಹೇಶ್, ಕೆಲ್ಲಂಬಳ್ಳಿ ಪರಶಿವ ಹಾಗೂ ಇತರರು ಉಪಸ್ಥಿತರಿದ್ದರು.