ಚಾಮರಾಜನಗರ, ಅ.9: ಜಿಲ್ಲೆಯಲ್ಲಿ ಇದೇ ಅ.24 ಮತ್ತು 25 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಹೊಂಗನೂರು ಗ್ರಾಮಸ್ಥರು 1 ಲಕ್ಷ ರೂ, ದೇಣಿಗೆ ನೀಡಿದ್ದಾರೆ.
ಹೊಂಗನೂರು ಗಡಿಮನೆಯ ಪರಿಶಿಷ್ಟ ಜಾತಿಯ ಬಲಗೈ ಜನಾಂಗದ ದೊಡ್ಡ ಯಜಮಾನರುಗಳು, ಎಲ್ಲಾ ಪಾರ್ಟಿಯ ಯಜಮಾನರುಗಳು, ಕುಲ ಬಾಂಧವರು, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದವರು, ಪುರುಷ ಮತ್ತು ಮಹಿಳಾ ವಿವಿಧ ಸಂಘ-ಸಂಸ್ಥೆಯವರು, ಸರ್ಕಾರಿ ಮತ್ತು ನಿವೃತ್ತ ನೌಕರರು, ಅರೆ ಸರ್ಕಾರಿ ನೌಕರರು ಹಾಗೂ ರೈತ ಬಾಂಧವರು ಒಟ್ಟಾಗಿ ಸೇರಿ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ 1 ಲಕ್ಷ ರೂ, ದೇಣಿಗೆಯನ್ನು ದಾನವಾಗಿ ನೀಡಿದ್ದಾರೆ.
ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಅಧ್ಯಕ್ಷರೂ ಆಗಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಗುರುವಾರ 1 ಲಕ್ಷ ರೂ, ದೇಣಿಗೆಯನ್ನು ಗ್ರಾಮಸ್ಥರು ನೀಡಿದರು. ಅದಲ್ಲದೇ ಗ್ರಾಮದ ಹಲವು ಮುಖಂಡರು ವೈಯಕ್ತಿಕವಾಗಿಯೂ ದೇಣಿಗೆಯನ್ನು ನೀಡಿದ್ದು, ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿದ್ದಾರೆ.