*ಗುತ್ತಿಗೆದಾರ ಗೋವಿಂದರಾಜು ಅವರಿಂದ ವೈಯಕ್ತಿಕವಾಗಿ 10 ಸಾವಿರ ರೂ, ದೇಣಿಗೆ
ಚಾಮರಾಜನಗರ: ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರು ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದ ಯಶಸ್ವಿಗೆ 1,03,101 ರೂ, ಧಮ್ಮ ದಾನವನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಅ.24 ಮತ್ತು 25 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಸಿದ್ದಯ್ಯನಪುರ ಗ್ರಾಮದ ವತಿಯಿಂದ ಸಮ್ಮೇಳನದ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಕೊಳ್ಳೇಗಾಲದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರಿಗೆ 1,03,101 ರೂ, ಧಮ್ಮ ದಾನವನ್ನು ನೀಡಲಾಯಿತು. ಈ ಮೂಲಕ ಸಮ್ಮೇಳನದ ಯಶಸ್ಸಿಗೆ ಬೆಂಬಲ ನೀಡಲಾಯಿತು.

ಈ ಸಂದರ್ಭದಲ್ಲಿ ಸಿದ್ದಯ್ಯನಪುರ ಗ್ರಾಮದ ಯಜಮಾನರು ಮಾತನಾಡಿ, ಮೈಸೂರಿನ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಯಶಸ್ಸಿಗೆ ನಮ್ಮ ಗ್ರಾಮದ ಪ್ರತಿಯೊಂದು ಕುಟುಂಬವು ಸಹಕಾರ ನೀಡಿದೆ. ಸಮ್ಮೇಳನದ ಎರಡು ದಿನವೂ ಗ್ರಾಮಸ್ಥರು ಭಾಗಿಯಾಗಲು ತೀರ್ಮಾನಿಸಿದ್ದೇವೆ ಎಂದರು.
ಗುತ್ತಿಗೆದಾರ ಗೋವಿಂದರಾಜು ದೇಣಿಗೆ: ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಎಸ್.ಆರ್.ಗೋವಿಂದರಾಜು ಅವರು ಸಹ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ವೈಯಕ್ತಿಕವಾಗಿ 10,000 ರೂ, ಧಮ್ಮ ದಾನವನ್ನು ನೀಡಿದರು.