ಸಿಮ್ಸ್ ಗೆ 40 ಪಿಜಿ, 50 ಯುಜಿಸಿ ಸೀಟು ಹೆಚ್ಚಳ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ನ ಸ್ನಾತಕೋತ್ತರ ಕೋರ್ಸ್‌ಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು 40 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಹಾಗೂ 50 ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿದೆ.

ಚಾಮರಾಜನಗರ ಸರ್ಕಾರಿ ವೈದ್ಯಕೀಯ ಕಾಲೇಜು 2016-17ನೇ ಸಾಲಿನಲ್ಲಿ 150 ಸೀಟುಗಳ ಎಂಬಿಬಿಎಸ್ ಕೋರ್ಸ್ ಸಿಮ್ಸ್‌ನಲ್ಲಿ ಆರಂಭಗೊಂಡಿತು. ಬಳಿಕ ಸ್ನಾತಕೋತ್ತರ ಕೋರ್ಸ್‌ಗಳಿಗೂ ಚಾಲನೆ ನೀಡಲಾಯಿತು. ಕಳೆದ ಸಾಲಿನಲ್ಲಿ ಸಿಮ್ಸ್ ಗೆ 45 ಸ್ನಾತಕೋತ್ತರ ಕೋರ್ಸ್‌ಗಳ ಸಿಟ್ಟನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಸಿಮ್ಸ್ ಆಡಳಿತ ಮಂಡಳಿ ಎಂಬಿಬಿಎಸ್ ಸೀಟುಗಳ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದರು‌. ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರ್ಕಾರ 40 ಸ್ನಾತಕೋತ್ತರ ಮತ್ತು 50 ಎಂಬಿಬಿಎಸ್ ಸೀಟುಗಳನ್ನು ಹೆಚ್ಚುವರಿಯಾಗಿ ನೀಡಿರುವುದರಿಂದ ಸಿಮ್ಸ್ ಗೆ ಮತ್ತಷ್ಟು ಬಲ ತುಂಬಿದಂತಾಗಿದೆ.

ಸಿಮ್ಸ್ ನಲ್ಲಿ ಎಂಬಿಬಿಎಸ್ ಪೂರೈಸುವ ವಿದ್ಯಾರ್ಥಿಗಳು ಅದೇ ಕ್ಯಾಂಪಸ್ ನಲ್ಲಿ ಪಿಜಿಯನ್ನು ಕಲಿಯಲು ಇದು ಸಹಕಾರಿಯಾಗಲಿದೆ. ಈ ಮೂಲಕ ಸಿಮ್ಸ್ ಆಸ್ಪತ್ರೆಯ ಬೆಳವಣಿಗೆ ಮತ್ತು ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಸಿಗುವಂತಾಗುತ್ತದೆ. ಈಗಾಗಲೇ ಹಲವಾರು ಪಿಜಿ ವಿದ್ಯಾರ್ಥಿಗಳು ಸಿಮ್ಸ್ ನಲ್ಲಿ ವೈದ್ಯಕೀಯ ತಪಾಸಣೆ, ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಹಿರಿಯ ವೈದ್ಯರಿಗೆ ನೆರವಾಗುತ್ತಿದ್ದಾರೆ. ಹೆಚ್ಚುವರಿ ಕೋರ್ಸ್ ಗಳು ಮತ್ತು ವೈದ್ಯಕೀಯ ಸೀಟುಗಳು ಲಭ್ಯವಾದರೇ ಸಿಮ್ಸ್ ಪ್ರಗತಿಗೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದಲ್ಲಿರುವ ಆಸ್ಪತ್ರೆಗಳಿಗೂ ಹೆಚ್ಚಿನ ಬೆಲೆ ತುಂಬಿದಂತಾಗುತ್ತದೆ.

ಹೆಚ್ಚುವರಿ ಪಿಜಿ ಸೀಟುಗಳು: 2025-26 ನೇ ಸಾಲಿನಲ್ಲಿ ಇ.ಎನ್.ಟಿ, ಡೆರ್ಮಟಾಲಜಿ, ಜನರಲ್ ಮೆಡಿಸಿನ್, ಪೆಡಿಯಾಟ್ರಿಕ್ಸ್, ರೆಸ್ಪಿರ್ಯಾಟರಿ ಮೆಡಿಸಿನ್ ಒಳಗೊಂಡಂತೆ 40 ಪಿಜಿ ಸೀಟುಗಳನ್ನು ಸಿಮ್ಸ್ ನಲ್ಲಿ ಹೆಚ್ಚಳ ಮಾಡಲಾಗಿದೆ. ಅದಲ್ಲದೇ 5 ಯುಜಿ ಸೀಟುಗಳನ್ನು ಹೆಚ್ಚಳ ಮಾಡಲಾಗಿದ್ದು, ಒಟ್ಟಾರೆ 75 ಕೋಟಿ ರೂ, ಅನುದಾನ ಲಭ್ಯವಾಗಲಿದೆ. ಇದು ಸಿಮ್ಸ್ ನಲ್ಲಿ ಇನ್ನು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿದು.

ಗ್ರಾಮೀಣ ಭಾಗದ ಆಸ್ಪತ್ರೆಗಳಿಗೂ ಬಲ: ಸಿಮ್ಸ್ ಆಸ್ಪತ್ರೆಯಲ್ಲಿ ಪಿಜಿ ಸೀಟುಗಳು ಹೆಚ್ಚಳವಾಗುವುದರಿಂದ ಸಿಮ್ಸ್ ಆಸ್ಪತ್ರೆಯಲ್ಲದೇ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೂ ಕಾಲಕಾಲಕ್ಕೆ ವೈದ್ಯರು ಲಭ್ಯವಾಗಿದ್ದಾರೆ. ಈಗಾಗಲೇ ಸಿಮ್ಸ್ ಆಸ್ಪತ್ರೆಯಲ್ಲಿ ಪಿಜಿ ವೈದ್ಯರು ಸಿಗುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿತ್ತು. ಹೆಚ್ಚಿನ ಪಿಜಿ ವೈದ್ಯರು ಲಭ್ಯವಾಗುವುದರಿಂದ ಈ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇದು ಅತ್ಯಂತ ಅನುಕೂಲಕರವಾಗಿದೆ.

 

Share this Article
Leave a comment