ಚಾಮರಾಜನಗರ: ನಗರದ ಗಾಳಿಪುರ ಬಡಾವಣೆಯ ಶರ್ಫುನ್ನಿಸ ಮಸೀದಿಯಲ್ಲಿ ದಿ.ಸೈಯದ್ ಇರ್ಷಾದ್ ಉಲ್ಲಾ ಅವರ ಸಂತಾಪ ಸಭೆ ಕಾರ್ಯಕ್ರಮವನ್ನು ಬುಧವಾರ ಹಮ್ಮಿ ಕೊಳ್ಳಲಾಯಿತು.
ಸಂತಾಪ ಸಭೆಯಲ್ಲಿ ಮೌಲಾನ ಮಹಮ್ಮದ್ ಇಸ್ಮಾಯಿಲ್ ಅವರು ಮಾತನಾಡಿ, ದಿ.ಸೈಯದ್ ಇರ್ಷಾದ್ ಉಲ್ಲಾ ಅವರು ಚೂಡ ಅಧ್ಯಕ್ಷರಾಗಿ, ಮೈಸೂರು ದೂರವಾಣಿ ಸಂಪರ್ಕ ಸಲಹೆ ಸಮಿತಿಯ ಸದಸ್ಯರಾಗಿ, ರಾಜ್ಯ ಹಜ್ ಸಮಿತಿಯ ಸದಸ್ಯರು ಹಾಗೂ ಉಪಾಧ್ಯಕ್ಷರಾಗಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದರು ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲಾವಕ್ಫ್ ಮಂಡಳಿಯ ಮೂರು ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸೈಯದ್ ಇರ್ಷಾದ್ ಉಲ್ಲಾ ಅವರು ನಿಧನರಾಗಿದ್ದಾರೆ. ಇವರು ನಡೆದು ಬಂದಿರುವಂತಹ ಹಾದಿಯನ್ನು ಸಮಾಜ ಎಂದಿಗೂ ಮರೆಯಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಿವಂಗತರು ರಾಜಕೀಯವಾಗಿ ಹಾಗೂ ಸಮುದಾಯದ ಏಳಿಗೆಗಾಗಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಅವರು ನಮ್ಮಿಂದ ಅಗಲಿರುವುದು ತುಂಬುಲಾರದ ನಷ್ಟ ಉಂಟುಮಾಡಿದೆ ಎಂದು ಸಂತಾಪ ಸೂಚಿಸಿದರು.
ಸಭೆಯಲ್ಲಿ ಮೌಲಾನ ಅಬ್ದು ಖಾದರ್, ಮೌಲಾನ ಇಕ್ಬಾಲ್ ಅಹ್ಮದ್, ಹಾಫಿಜ್ ಲತೀಫುರ್ ರಹ್ಮಾನ್, ಮುಫ್ತಿ ಸೈಯದ್ ಜಾಹಿದ್ ಉಜ್ಜಮಾನ್, ಚೂಡ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಎಸ್ಡಿಪಿಐ ರಾಜ್ಯ ಸದಸ್ಯ ಅಬ್ರಾರ್ ಅಹ್ಮದ್, ಎಸ್ ಪಿಎಸ್ ಗ್ರಾನೈಟ್ ಮಾಲಿಕ ಫೈಸಲ್ ಉಲ್ಲಾ ಶರೀಫ್, ಸಿದ್ದೀಕ್ ಖಾನ್ ಹಾಗೂ ಇತರರು ಭಾಗವಹಿಸಿದ್ದರು.